` ನಗ್ತಾರಂತೆ.. ನಗಿಸ್ತಾರಂತೆ.. ಭರಾಟೆ ಶ್ರೀಮುರಳಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srimurali's different avatr in bharaate
Bharaate Movie Image

ಉಗ್ರಂ ನಂತರ ಶ್ರೀಮುರಳಿ ಲುಕ್ ಕಂಪ್ಲೀಟ್ ಚೇಂಜ್ ಆಗಿ ಹೋಯ್ತು. ಅದಾದ ಮೇಲೆ ಶ್ರೀಮುರಳಿ ಕೂಡಾ ಚ್ಯೂಸಿಯಾಗಿಬಿಟ್ರು. ಉಗ್ರಂ, ಐರಾವತ ಹಾಗೂ ಮಫ್ತಿಗಳಲ್ಲಿ ಕಂಡ ಶ್ರೀಮುರಳಿಯೇ ಬೇರೆ. ಮಾತು ಕಡಿಮೆ, ಕಣ್ಣಲ್ಲೇ ಕೊಲ್ಲುವ ನೋಟ, ಬೆಂಕಿಯುಂಡೆಯಂತಹ ಮಾತು.. ಚಂದ್ರಚಕೋರಿಯ ಮುಗ್ಧ ಪ್ರೇಮಿ ನಾಪತ್ತೆಯಾಗಿಬಿಟ್ಟಿದ್ದರು. ಆದರೆ ಭರಾಟೆಯಲ್ಲಿ ಅದೆಲ್ಲವನ್ನೂ ಹೊರತುಪಡಿಸಿದ ಶ್ರೀಮುರಳಿ ಕಾಣಿಸ್ತಾರಂತೆ.

ಈ ಚಿತ್ರದಲ್ಲಿ ಶ್ರೀಮುರಳಿ ನಗ್ತಾರೆ, ನಗಿಸ್ತಾರೆ, ಅಳಿಸ್ತಾರೆ, ಸರಳವಾಗಿ ಹೇಳಬೇಕಂದರೆ ನವರಸಗಳನ್ನೂ ತೋರಿಸ್ತಾರೆ. ಇದು ಶ್ರೀಮುರಳಿಯ ವಿಭಿನ್ನ ಅವತಾರ. ಈ ಚಿತ್ರ ಅವರಿಗೆ ಬೇರೆಯದೇ ಇಮೇಜ್ ಕೊಡಲಿದೆ ಎನ್ನುತ್ತಾರೆ ನಿರ್ದೇಶಕ ಭರ್ಜರಿ ಚೇತನ್.

ಭರಾಟೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು, ಶ್ರೀಮುರಳಿಗೆ ಶ್ರೀಲೀಲಾ ಜೋಡಿ. ಭರಾಟೆಯಲ್ಲಿ 47 ಜನ ಪೋಷಕ ನಟರಿದ್ದಾರೆ. ಸುಪ್ರೀತ್ ನಿರ್ಮಾಣದ ಅದ್ಧೂರಿ ಸಿನಿಮಾ, ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

#

Ayushmanbhava Movie Gallery

Damayanthi Audio and Trailer Launch Gallery