` ದಾರಿ ತಪ್ಪಿದ ಮಗ ಶಿವ 143 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shiva 122 replaces daari thappidha maga movie title
Dheeran Ramkumar

ದಾರಿ ತಪ್ಪಿದ ಮಗ ಚಿತ್ರದ ಟೈಟಲ್ ಬದಲಾಗುತ್ತಿದೆ. ಅಣ್ಣಾವ್ರ ಚಿತ್ರದ ಟೈಟಲ್ ಇಟ್ಟುಕೊಂಡರೆ ನಿರೀಕ್ಷೆ ಹೆಚ್ಚಾಗುತ್ತೆ ಹಾಗೂ ಅಭಿಮಾನಿಗಳಿಂದಲೂ ಆ ಟೈಟಲ್ ಬೇಡ ಎಂಬ ಮನವಿಯಿದೆ. ಹೀಗಾಗಿ ಟೈಟಲ್‍ನ್ನು ಕೈಬಿಡುತ್ತಿದ್ದೇವೆ ಎಂದು ತಿಳಿಸಿದ್ದರು ನಿರ್ಮಾಪಕ ಜಯಣ್ಣ. ಈಗ ಅದೇ ಚಿತ್ರಕ್ಕೆ ಶಿವ 143 ಅನ್ನೋ ಟೈಟಲ್ ಇಡಲಾಗಿದೆಯಂತೆ.

ಇದು ರಾಮ್‍ಕುಮಾರ್ ಹಾಗೂ ಪೂರ್ಣಿಮಾ (ಡಾ.ರಾಜ್ ಪುತ್ರಿ) ಮಗ ಧಿರೇನ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಕಥೆ. ಧಿರೇನ್ ರಾಮ್‍ಕುಮಾರ್ ಎದುರು ನಾಯಕಿಯಾಗಿ ಮಾನ್ವಿತಾ ಹರೀಶ್ ಇದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಶಿವ 143 ಅನ್ನೋ ಟೈಟಲ್ ಇಡುವ ಬಗ್ಗೆ ಗಂಭೀರ ಚರ್ಚೆಯಾಗುತ್ತಿದೆ.

ವಿಶೇಷ ಅಂದ್ರೆ ಇಲ್ಲಿಯೂ ಒಂದು ಸೆಂಟಿಮೆಂಟ್ ಇದೆ. ಶಿವ ಎಂದರೆ ಶಿವರಾಜ್ ಕುಮಾರ್ ನೆನಪಾಗ್ತಾರೆ. ಧಿರೇನ್ ಅವರಿಗೆ ಶಿವಣ್ಣ, ಮಾವನಾಗಬೇಕು. ಇನ್ನು 143 ಎಂದರೆ ಐ ಲವ್ ಯೂ ಎಂದರ್ಥ. ಡಿಸೆಂಬರ್ ಅಥವಾ 2020ರ ಜನವರಿಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

#

Ayushmanbhava Movie Gallery

Damayanthi Audio and Trailer Launch Gallery