` ದರ್ಶನ್ ಮೇಲೆ ತೆಲುಗು ಸ್ಟಾರ್ ಬರಹಗಾರನ ಕಣ್ಣು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
telugu star writer plans for a movie with darshan
Darshan

ಆತನ ಹೆಸರು ವಕ್ಕಂತಮ್ ವಂಶಿ. ಸಣ್ಣದೊಂದು ಮೆಸೇಜ್, ಆ ಮೆಸೇಜ್ ಹೇಳಲು ಮಸಾಲಾ ತುಂಬಿದ ದೃಶ್ಯ, ಸಸ್ಪೆನ್ಸ್, ಒಂದಿಷ್ಟು ರೊಮ್ಯಾನ್ಸ್.. ಎಲ್ಲವನ್ನೂ ಇಟ್ಟುಕೊಂಡು ಚೆಂದಗೆ ಕಥೆ ಹೇಳುವ ಕಥೆಗಾರ. ಮಹೇಶ್ ಬಾಬುಗೆ ಅತಿಥಿ, ಜ್ಯೂ. ಎನ್ಟಿಆರ್ಗೆ ಅಶೋಕ, ಟೆಂಪರ್, ಊಸರವಳ್ಳಿ, ರಾಮ್ ಚರಣ್ಗೆ ಯೆವಡು, ರವಿತೇಜಗೆ ಕಿಕ್, ಕಿಕ್-2, ಟಚ್ ಚೇಸಿ ಚೂಡು,  ಅಲ್ಲು ಅರ್ಜುನ್ಗೆ ರೇಸುಗುರ್ರಂ, ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ ಚಿತ್ರಗಳಿಗೆ ಕಥೆ ಬರೆದವರು. ಬಹುತೇಕ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಈ ಕಥೆಗಾರನ ಕಣ್ಣೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಬಿದ್ದಿದೆಯಂತೆ.

ದರ್ಶನ್ ಅವರಿಗಾಗಿಯೇ ಪಕ್ಕಾ ಌಕ್ಷನ್ ಕಥೆ ಸಿದ್ಧ ಮಾಡಿಟ್ಟುಕೊಂಡಿರುವ ವಂಶಿ, ದರ್ಶನ್ ಜೊತೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರಂತೆ. ಮುಂದಿನ ವರ್ಷ ಈ ಚಿತ್ರ ಸೆಟ್ಟೇರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸದ್ಯಕ್ಕೆ ದರ್ಶನ್ ರಾಬರ್ಟ್, ಒಡೆಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ ಮದಕರಿನಾಯಕನ ಚಿತ್ರ ಶುರುವಾಗಬೇಕು. ಮಿಲನ ಪ್ರಕಾಶ್ ಕೂಡಾ ರೆಡಿಯಿದ್ದಾರೆ. ಇಷ್ಟೆಲ್ಲದರ ನಡುವೆ ವಂಶಿ ನಿರ್ದೇಶನದಲ್ಲಿ ಹೊಸ ಚಿತ್ರ ಸೆಟ್ಟೇರಿದರೂ ಆಶ್ಚರ್ಯವಿಲ್ಲ.

#

Ayushmanbhava Movie Gallery

Damayanthi Audio and Trailer Launch Gallery