ಹೈದರಾಬಾದ್ ಮುಗೀತು.. ಮಿಕ್ಕಿದ್ದೆಲ್ಲ ಕರ್ನಾಟಕದಲ್ಲಿ.. ಕೆಜಿಎಪ್ ಚಾಪ್ಟರ್ 2 UPDATE
ಕೆಜಿಎಫ್ ಚಾಪ್ಟರ್-2 ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ಕೊಡ್ತಿಲ್ಲ. ಒಂದೇ ಒಂದು ಟೀಸರ್ ತೋರಿಸಿಲ್ಲ. ಫಸ್ಟ್ ಲುಕ್ ಹೊರಬಿದ್ದಿಲ್ಲ. ಏನಾಗ್ತಿದೆ ಕೆಜಿಎಪ್ ಚಾಪ್ಟರ್ 2..? ಇದು ಅಭಿಮಾನಿಗಳು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ನವರನ್ನು ಕೇಳ್ತಿರೋ ಪ್ರಶ್ನೆ. ಆ ಪ್ರಶ್ನೆಗೆ ಸಂಪೂರ್ಣ ಉತ್ತರ ಅಲ್ಲದೇ ಹೋದರೂ, ಒಂದು ಅಪ್ಡೇಟ್ ಇದು.
ಕೆಜಿಎಫ್ ಚಾಪ್ಟರ್ 2 ಟೀಂ, ಹೈದರಾಬಾದ್ನ ಶೂಟಿಂಗ್ ಮುಗಿಸಿದೆ. ಇದು ಅತ್ಯಂತ ದೀರ್ಘವಾದ ಶೂಟಿಂಗ್ ಶೆಡ್ಯೂಲ್ ಎಂದು ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಮುಂದಿನ ಭಾಗದ ಚಿತ್ರೀಕರಣ ಕರ್ನಾಟಕ ಕೆಜಿಎಫ್ ಹಾಗೂ ಸೆಟ್ನಲ್ಲಿ ನಡೆಯಲಿದೆ. ಹೈದರಾಬಾದ್ನಲ್ಲಿ ಪ್ರಮುಖವಾಗಿ ಸಂಜಯ್ ದತ್ ಅವರ ಅಧೀರ ಪಾತ್ರದ ಪೋರ್ಷನ್ ಶೂಟಿಂಗ್ ಆಗಿದೆ.