` ಸೃಜನ್ ಲೋಕೇಶ್ ಬದುಕಿನ ಅತಿ ದೊಡ್ಡ ಕನಸು ತಾತನ ಪ್ರಶಸ್ತಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srujan lokesh's life time dream is to get his grandad's award
Srujan Lokesh

ಸೃಜನ್ ಲೋಕೇಶ್ ಈಗ ಟಾಕಿಂಗ್ ಸ್ಟಾರ್ ಅಷ್ಟೇ ಅಲ್ಲ, ರೊಮ್ಯಾಂಟಿಕ್ ಸ್ಟಾರ್ ಕೂಡಾ ಆಗಿದ್ದಾರೆ. ಎಲ್ಲಿದ್ದೆ ಇಲ್ಲೀ ತನಕ, ಅಪ್ಪಟ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಲೋಕೇಶ್ ಪ್ರೊಡಕ್ಷನ್ಸ್ ಮೂಲಕವೇ ನಿರ್ಮಾಣವಾಗಿರೋ ಸಿನಿಮಾದಲ್ಲಿ ಸೃಜನ್‍ಗೆ ಹರಿಪ್ರಿಯಾ ನಾಯಕಿ.

ಚಿತ್ರರಂಗಕ್ಕೆ ಹೀರೋ ಆಗಿಯೇ ಎಂಟ್ರಿ ಕೊಟ್ಟ ಸೃಜನ್, ಈಗ ಒಂದು ಭರ್ಜರಿ ಹಿಟ್ ನಿರೀಕ್ಷೆಯಲ್ಲಿದ್ದಾರೆ. ಅದು ಎಲ್ಲಿದ್ದೆ ಇಲ್ಲೀ ತನಕ ಚಿತ್ರದಲ್ಲಿ ಈಡೇರುವ ನಿರೀಕ್ಷೆ ಅವರಲ್ಲಿದೆ. ಮಜಾ ಟಾಕೀಸ್ ನಿರ್ದೇಶಿಸಿದ್ದ ತೇಜಸ್ವಿ, ಈ ಚಿತ್ರದ ಮೂಲಕ ಬೆಳ್ಳಿತೆರೆಯ ಡೈರೆಕ್ಟರ್ ಆಗಿದ್ದಾರೆ.

ಇಂತಹ ಸೃಜನ್ ಲೋಕೇಶ್ ಅವರಿಗೆ ಇರುವ ಅತಿ ದೊಡ್ಡ ಆಸೆಯೇನು ಗೊತ್ತಾ.? ಸುಬ್ಬಯ್ಯ ನಾಯ್ಡು ಪ್ರಶಸ್ತಿ ಪಡೆಯುವುದು. ಕನ್ನಡ ಚಿತ್ರರಂಗದ ಮೊದಲ ಟಾಕಿ ಚಿತ್ರದ ಹೀರೋ ಸುಬ್ಬಯ್ಯ ನಾಯ್ಡು. ಅವರು ಸೃಜನ್ ಲೋಕೇಶ್ ಅವರ ತಾತ. ಲೋಕೇಶ್ ಅವರ ತಂದೆ. ಗಿರಿಜಾ ಲೋಕೇಶ್ ಅವರ ಮಾವ. ಕನ್ನಡದ ರಾಜ್ಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅವರ ಹೆಸರಿನಲ್ಲೇ ನೀಡಲಾಗುತ್ತದೆ. ಆ ಪ್ರಶಸ್ತಿಯನ್ನು ನಾನೊಮ್ಮೆ ಪಡೆಯಬೇಕು ಎನ್ನುವ ಆಸೆ ನನ್ನದು ಎಂದು ಹೇಳಿಕೊಂಡಿದ್ದಾರೆ ಸೃಜನ್. ಅವರ ಆಸೆ ಎಲ್ಲಿದ್ದೆ ಇಲ್ಲೀ ತನಕ ಚಿತ್ರದಲ್ಲೇ ಈಡೇರಲಿ ಎನ್ನುವುದು ಎಲ್ಲರ ಹಾರೈಕೆ.

Shivarjun Trailer Launch Gallery

Popcorn Monkey Tiger Movie Gallery