ಅಧ್ಯಕ್ಷ ಇನ್ ಅಮೆರಿಕ ಗೆದ್ದಿದ್ದಾರೆ. ಸತತ 2 ಗಂಟೆಯ ನಿರಂತರ ಕಾಮಿಡಿಗೆ ಪ್ರೇಕ್ಷಕರು ನಕ್ಕಿದ್ದಾರೆ. ಶರಣ್-ರಾಗಿಣಿ ಜೋಡಿ ಮೋಡಿ ಮಾಡಿದ್ದರೆ, ನಿರ್ದೇಶಕ ಯೋಗಾನಂದ್ ಚೊಚ್ಚಲ ಪ್ರಯತ್ನದಲ್ಲೇ ಬೌಂಡರಿ ಬಾರಿಸಿದ್ದಾರೆ. ನಿರ್ಮಾಪಕ ವಿಶ್ವಪ್ರಸಾದ್ ಅವರ ಖುಷಿಯೇ ಬೇರೆ. ಖಜಾನೆ ತುಂಬಿದೆ. ಯೆಸ್, ಅಧ್ಯಕ್ಷ ಗೆದ್ದಿದ್ದಾನೆ.
ಇದು ಮಲಯಾಳಂನ 2 ಕಂಟ್ರಿಸ್ ಚಿತ್ರದ ರೀಮೇಕ್. ಮಲಯಾಳಂನ ಸಿನಿಮಾ ತೆಲುಗಿಗೂ ರೀಮೇಕ್ ಆಗಿತ್ತು. ಈಗ ಕನ್ನಡದಲ್ಲಿ ನಾನೇ ಸಿನಿಮಾ ಮಾಡಿ ಗೆದ್ದಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ ನಿರ್ಮಾಪಕ ವಿಶ್ವಪ್ರಸಾದ್.
ಪ್ರೇಕ್ಷಕರ ನಗು ಚಪ್ಪಾಳೆ ಸಹಜವಾಗಿಯೇ ಶರಣ್, ರಾಗಿಣಿ, ಯೋಗಾನಂದ್ ಮುದ್ದಾನ್ ಅವರಿಗೆ ಖುಷಿ ಕೊಡುತ್ತೆ. ನಿರ್ಮಾಪಕರು ಕೂಡಾ ನಕ್ಕುಬಿಟ್ಟರೆ.. ಅದಕ್ಕಿಂತ ಖುಷಿ ಇನ್ನೇನಿದೆ.