ಹರಿಕೃಷ್ಣ, ದರ್ಶನ್ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕರೆಂದೇ ಹೆಸರಾದವರು. ಏಕೆಂದರೆ ದರ್ಶನ್ ಅವರ ಬಹುತೇಕ ಚಿತ್ರಗಳಲ್ಲಿ ಹರಿಕೃಷ್ಣ ಅವರದ್ದೇ ಮ್ಯೂಸಿಕ್. ಇನ್ನು ಅರ್ಜುನ್ ಜನ್ಯ ಕನ್ನಡದ ಮತ್ತೊಬ್ಬ ಟ್ರೆಂಡ್ ಸೆಟ್ಟರ್ ಮ್ಯೂಸಿಕ್ ಡೈರೆಕ್ಟರ್. ಈಗ ಅವರಿಬ್ಬರೂ ಒಟ್ಟಿಗೇ ಕೆಲಸ ಮಾಡ್ತಿದ್ದಾರೆ. ಆ ಎರಡೂ ಚಿತ್ರಗಳಿಗೆ ದರ್ಶನ್ ಅವರೇ ಹೀರೋ.
ಹರಿಕೃಷ್ಣ ಮೊದಲು ಸಂಗೀತ ನಿರ್ದೇಶಕರಾಗಿದ್ದು ದರ್ಶನ್ ಬ್ಯಾನರ್ ಚಿತ್ರದ ಮೂಲಕ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ನಿರ್ದೇಶಕರನ್ನಾಗಿಸಿದ್ದು ದರ್ಶನ್. ಇನ್ನು ಅರ್ಜುನ್ ಜನ್ಯ ಈ ಹಿಂದೆ ದರ್ಶನ್ ಜೊತೆ ತಾರಕ್, ಚಕ್ರವರ್ತಿ ಚಿತ್ರಗಳಿಗೆ ಹಿಟ್ ಹಾಡು ಕೊಟ್ಟಿದ್ದವರು.
ದರ್ಶನ್ ಅವರು ಸದ್ಯಕ್ಕೆ ಅಭಿನಯಿಸುತ್ತಿರುವ ಎರಡು ಚಿತ್ರಗಳು ರಾಬರ್ಟ್ ಮತ್ತು ಒಡೆಯ, ಎರಡೂ ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಆ ಎರಡು ಚಿತ್ರಗಳ ಹಿನ್ನೆಲೆ ಸಂಗೀತ ಹರಿಕೃಷ್ಣ ಅವರದ್ದು. ಇದನ್ನು ಸ್ವತಃ ದರ್ಶನ್ ಅವರೇ ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹರಿಕೃಷ್ಣ ಅವರಿಗೆ ರಿ-ರೆಕಾರ್ಡಿಂಗ್ ಕಿಂಗ್ ಅನ್ನೋ ಬಿರುದನ್ನೂ ಕೊಟ್ಟಿದ್ದಾರೆ.