ಭರ ಭರ ಭರಾಟೆ.. ಎನ್ನುತ್ತಲೇ ರಿಲೀಸ್ ಆಗೋಕೆ ರೆಡಿಯಾಗ್ತಿರೋ ಭರಾಟೆ ಚಿತ್ರದಲ್ಲಿ ಸ್ಪೆಷಲ್ಲುಗಳ ಮೇಲೆ ಸ್ಪೆಷಲ್ಲುಗಳ ಸುರಿಮಳೆ ಇದೆ. ಸಿನಿಮಾದಲ್ಲಿ ಶ್ರೀಮುರಳಿ ಎದುರು ಅಬ್ಬರಿಸ್ತಾ ಇರೋದು ಕೇವಲ ಸಾಯಿ ಬ್ರದರ್ಸ್ ಅಲ್ಲ. ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಜೊತೆ ಇನ್ನೂ 14 ವಿಲನ್ಸ್ ಇದ್ದಾರಂತೆ. ಅಲ್ಲಿಗೆ ಒಟ್ಟು 17 ಖಳನಾಯಕರು.
ಮಾಸ್ ಕಥೆಯನ್ನು ಮಸ್ತ್ ಮಸ್ತ್ ಆಗಿ ಹೇಳಿ ಗೆದ್ದಿರುವ ಭರ್ಜರಿ ಚೇತನ್, ಈ ಚಿತ್ರದಲ್ಲಿ ಇನ್ನೂ ಬೊಂಬಾಟ್ ಕಥೆ ಹೇಳಲಿದ್ದಾರೆ. ಶ್ರೀಮುರಳಿಗೆ ಜೊತೆಯಾಗಿ ಶ್ರೀಲೀಲಾ ಇದ್ದರೆ, ಗೆಸ್ಟ್ ಆಗಿ ಗಮ್ಮತ್ತು ತೋರಿಸಿರೋದು ರಚಿತಾ ರಾಮ್. ಶೋಭರಾಜ್, ಅವಿನಾಶ್, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ.. ಹೀಗೆ ಘಟಾನುಘಟಿಗಳ ತಂಡವೇ ಚಿತ್ರದಲ್ಲಿದೆ. ಸುಪ್ರೀತ್ ಬ್ಯಾನರ್‍ನ ಚಿತ್ರದಲ್ಲಿ ಕಥೆ ಏನು ಎನ್ನುವುದು ಇನ್ನೂ ನಿಗೂಢ.