` ಕಿರಿಕ್ ಪಾರ್ಟಿ ಡೇಟಿಗೇ ಅವನೇ ಶ್ರೀಮನ್ನಾರಾಯಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
avane srimanarayana to release in december
Avane Srimanaryana

ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹುಕೋಟಿ ಬಜೆಟ್ ಸಿನಿಮಾ. ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರ ಪ್ರೊಡಕ್ಷನ್ ಹಂತದಲ್ಲೇ 2 ವರ್ಷ ಪೂರೈಸಿದೆ. ಬರೋಬ್ಬರಿ 200 ದಿನಗಳ ಶೂಟಿಂಗ್ ಆಗಿದೆ. ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇತ್ತೀಚೆಗೆ 70 ದಿನಗಳ ಕೌಂಟ್ ಡೌನ್ ಕೊಟ್ಟಿದ್ದರು. ಈಗ ರಿಲೀಸ್ ಡೇಟ್ ಹೊರಬಿದ್ದಿದೆ.

ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಡಿಸೆಂಬರ್ ಕೊನೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ. ಅದು ಕಿರಿಕ್ ಪಾರ್ಟಿ ರಿಲೀಸ್ ಆದ ಡೇಟ್ನಲ್ಲೇ ಬರುವ ಸಾಧ್ಯತೆ ಹೆಚ್ಚು. 2016ರಲ್ಲಿ ಕಿರಿಕ್ ಪಾರ್ಟಿ ಬಾಕ್ಸಾಫೀಸ್ನಲ್ಲಿ ಅಲೆಲೆಲೆಲೆ.. ಎಂದೇ ಸದ್ದು ಮಾಡಿತ್ತು. ಈಗ ಶ್ರೀಮನ್ನಾರಾಯಣನ ಟೈಂ.