ದಬಾಂಗ್ 3. ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸೀಕ್ವೆಲ್. ಬಾಲಿವುಡ್ನ ಟ್ರೆಂಡ್ ಸೆಟ್ಟರ್ ಆಗಿರುವ ಚಿತ್ರದ 3ನೇ ಸೀಕ್ವೆಲ್ನಲ್ಲಿ ಚುಲ್ ಬುಲ್ ಪಾಂಡೆಗೆ ಕಿಚ್ಚ ಸುದೀಪ್ ವಿಲನ್. ಸುದೀಪ್ ಪಾತ್ರ ಹೇಗಿರಲಿದೆ ಅನ್ನೋದನ್ನು ಪೋಸ್ಟರ್ ಡಿಸೈನ್ ಮಾಡಿಸಿ ಬಿಟ್ಟಿದ್ದಾರೆ ಸಲ್ಮಾನ್ ಖಾನ್.
ಚಿತ್ರದಲ್ಲಿ ಸುದೀಪ್ ಹೆಸರು ಬಿಲ್ಲಿ ಎಂದಿರಲಿದೆ ಎನ್ನುವುದು ಪೋಸ್ಟರ್ ಹೇಳ್ತಿರೋ ಕಥೆ. ವಿಲನ್ ಎಷ್ಟು ಸ್ಟ್ರಾಂಗ್ ಇರ್ತಾನೋ.. ಅಷ್ಟು ಮಜಾ ಬರಲಿದೆ ಅಂತಿದ್ದಾರೆ ಸಲ್ಮಾನ್. ವಿಲನ್ ಜೊತೆ ಪ್ರೀತಿ ಆದರೆ ಹಿಂಗೆಲ್ಲ ಆಗುತ್ತೆ ಎಂದು ಕಿಚಾಯಿಸಿದ್ದಾರೆ ಸುದೀಪ್.
ಪೈಲ್ವಾನ್ ಕಿಚ್ಚನನ್ನು ನೋಡಿ ಬಂದಾ ನೋಡೋ ಪೈಲ್ವಾನ್ ಎಂದಿದ್ದ ಫ್ಯಾನ್ಸ್ಗೆ, ಸೈರಾದ ಅವುಕು ರಾಜನಾಗಿ ಬೇರೆಯದ್ದೇ ಅವತಾರ ತೋರಿಸಿದ್ದರು ಸುದೀಪ್. ಈಗ ಬಿಲ್ಲಿ ಸಿಂಗ್ ಆಗಿ ಕಿಕ್ ಕೊಡೋಕೆ ಬರುತ್ತಿದ್ದಾರೆ. ದಬಾಂಗ್ 3 ಕನ್ನಡದಲ್ಲೂ ಡಬ್ ಆಗಿ ಬರಲಿದೆ. ಚಿತ್ರಕ್ಕೆ ಪ್ರಭುದೇವ ಡೈರೆಕ್ಟರ್.