ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ಕಾಣಿಸಿಕೊಂಡಿರುವ ಚಿತ್ರ ಭೈರಾದೇವಿ. ಶಮಿಕಾ ಎಂಟರ್‍ಪ್ರೈಸಸ್ ನಿರ್ಮಾಣದಲ್ಲಿ ರೆಡಿಯಾಗಿರುವ ಭೈರಾದೇವಿ ಚಿತ್ರದ ಹಾಡಿನ ಲಿರಿಕಲ್ ವಿಡಿಯೋ, ಚಾಮುಂಡೇಶ್ವರಿ ಸನ್ನಿಧಿಯಲ್ಲೇ ರಿಲೀಸ್ ಆಗಿದೆ. ಯುವ ದಸರಾದಲ್ಲಿ ಭೈರಾದೇವಿ ಚಿತ್ರದ ಬಂದಾಳಮ್ಮಾ ಕಾಳಿಕಾ.. ಅನ್ನೋ ಲಿರಿಕಲ್ ಹಾಡು ಬಿಡುಗಡೆಯಾಗಿದೆ.
ಬಂದಾಳಮ್ಮ ಕಾಳಿಕಾ.. ದುಷ್ಟರನ್ನು ಕೊಲ್ಲುತಾ.. ಬಂದಾಳಮ್ಮ ಕಾಳಿಕಾ.. ಶಿಷ್ಟರನ್ನು ಕಾಯುತಾ.. ಎಂಬ ಹಾಡು ರೋಮಾಂಚನ ಹುಟ್ಟಿಸುವಂತಿದೆ. ನಿರ್ದೇಶಕ ಶ್ರೀಜೈ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಮೇಶ್ ಅರವಿಂದ್-ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿ ಬೆಳ್ಳಿತೆರೆಯ ಮೇಲೆ ಒಂದಾಗಿದ್ದಾರೆ.