ಎ.ಪಿ.ಅರ್ಜುನ್ ಕಿಸ್ ಕೊಟ್ಟು ಗೆದ್ದಿದ್ದಾರೆ. ಶ್ರೀಲೀಲಾ-ವಿರಾಟ್ ಜೋಡಿ ಮೋಡಿ ಮಾಡಿದೆ. ಹರಿಕೃಷ್ಣ ಹಾಡುಗಳು ಪ್ರೇಮದ ಅಮಲು ಹೆಚ್ಚಿಸಿವೆ. ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಾಣ್ತಿರೋ ಕಿಸ್ ಚಿತ್ರದ ಸೀಕ್ವೆಲ್ ಮಾಡಲು ಸಿದ್ಧರಾಗಿದ್ದಾರೆ ಎ.ಪಿ.ಅರ್ಜುನ್.
ಸೀಕ್ವೆಲ್ ಮಾಡುವ ಚಿಂತನೆ ಇದೆ ಎಂದಿರೋ ಎ.ಪಿ.ಅರ್ಜುನ್, 2ನೇ ಭಾಗದಲ್ಲಿ ಇನ್ನೊಂದು ವಿಭಿನ್ನ ಲವ್ ಸ್ಟೋರಿ ಹೇಳಲಿದ್ದಾರಂತೆ. ಅದೇ ಶ್ರೀಲೀಲಾ.. ಅದೇ ವಿರಾಟ್.. ಕಂಟಿನ್ಯೂ ಆಗುವ ಸಾಧ್ಯತೆ ಹೆಚ್ಚಿದೆ. ಕಥೆ ಒಂದು ಹಂತಕ್ಕೆ ಬಂದ ಮೇಲೆ ಮುಂದಿನ ತಯಾರಿ. ಸದ್ಯಕ್ಕೆ ಕಿಸ್ ಸಕ್ಸಸ್ ಎಂಜಾಯ್ ಮಾಡ್ತಿದ್ದೇನೆ ಎಂದಿದ್ದಾರೆ ನಿರ್ಮಾಪಕರು ಆಗಿರುವ ಎ.ಪಿ.ಅರ್ಜುನ್.