` ನಟಿಸುತ್ತಿರುವಾಗಲೇ ಹೃದಯಾಘಾತ : ಸಹಾಯಕ್ಕಾಗಿ ನಟ ಜಯಕುಮಾರ್ ಪತ್ನಿ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tv artist jaikumar hospitalized
actor Jaikumar Hospitalized

ಜಯಕುಮಾರ್, ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಪರಿಚಿತ ಮುಖ. ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ದೇವರಾಜ್, ದರ್ಶನ್ ಸೇರಿದಂತೆ ಹಲವು ಕಲಾವಿದರ ಜೊತೆಯಲ್ಲಿ ನಟಿಸಿರುವ ಜಯಕುಮಾರ್, ಕೊಡಗನೂರಿನವರು. ರಂಗಭೂಮಿ, ಕಿರುತೆರೆಯ ಧಾರಾವಾಹಿಗಳು ಹಾಗೂ ಸಿನಿಮಾ.. ಮೂರನ್ನೂ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಜಯಕುಮಾರ್, ಗುಬ್ಬಿ ಕಂಪೆನಿ, ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ.. ಸೇರಿದಂತೆ 20ಕ್ಕೂ ಹೆಚ್ಚು ಡ್ರಾಮಾ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ಹೆಚ್ಚು ಕಡಿಮೆ 50 ವರ್ಷಗಳಷ್ಟು ಬದುಕನ್ನು ಬಣ್ಣದ ಲೋಕದಲ್ಲಿಯೇ ಕಳೆದಿದ್ದಾರೆ. ಅವರಿಗೀಗ ಹೃದಯಾಘಾತವಾಗಿದೆ.

ಗುಲ್ಬರ್ಗಾದಲ್ಲಿ ನಟಿಸುತ್ತಿರುವಾಗಲೇ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ 2ನೇ ಬಾರಿ ಹಾರ್ಟ್ ಅಟ್ಯಾಕ್.  ದಾವಣಗೆರೆಗೆ ದಾಖಲಿಸಿದ್ದಾರೆ. ಅಲ್ಲಿ ಸ್ಟಂಟ್ ಅಳವಡಿಸಿ ಕಳಿಸುವ ಹೊತ್ತಿಗೆ ಕಿಡ್ನಿ ಫೇಲ್ ಆಗುವ ಸೂಚನೆ ಸಿಕ್ಕಿದೆ. ಒಂದು ಹಂತದವರೆಗೂ ಆಸ್ಪತ್ರೆ ವೆಚ್ಚವನ್ನು ಭರಿಸಿರುವ ಕುಟುಂಬ ಈಗ ಕಂಗಾಲಾಗಿ ಹೋಗಿದೆ.

15 ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಜಯಕುಮಾರ್. ದಯವಿಟ್ಟು ಸಹಾಯ ಮಾಡಿ ಎಂದು ಪತ್ನಿ ಪದ್ಮಾವತಿ ಹಾಗೂ ಮಗ ಮಾರುತಿ ಮನವಿ ಮಾಡಿಕೊಂಡಿದ್ದಾರೆ.

Kaalidasa Kannada Mestru Movie Gallery

Kabza Movie Launch Gallery