ಅಭಿಮಾನಿ ದೇವರುಗಳ ಒತ್ತಡ, ಪ್ರೀತಿಗೆ ತಕ್ಕಂತೆಯೇ ಹೊರಬಿದ್ದಿದೆ ಯುವರತ್ನ ಟೀಸರ್. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರದ ಟೀಸರ್ ನೋಡಿ ಫ್ಯಾನ್ಸ್ ಫಿದಾ ಆಗೋಕೆ ಕಾರಣ, ಪವರ್ ಸ್ಟಾರ್ ಪುನೀತ್ ಅವರ ಲುಕ್ಕು.
ಇಡೀ ಟೀಸರ್‍ನಲ್ಲಿ ಕಾಣಿಸಿಕೊಂಡಿರೋದು ರಗ್ಬಿ ಆಟಗಾರ ಪುನೀತ್. ಆರ್‍ಕೆ ಅನ್ನೋ ಟೀ ಶರ್ಟ್ ಇದೆ. ಆರ್‍ಕೆ ಅಂದ್ರೆ ರಾಜ್‍ಕುಮಾರ್ ಅನ್ನೋದು ಅಭಿಮಾನಿಗಳ ಲೆಕ್ಕ. ಈ ದುನಿಯಾದಲ್ಲಿ ಮೂರು ತರಹದ ಗಂಡಸರು ಇರ್ತಾರೆ. ಒಂದು ರೂಲ್ಸ್ ಫಾಲೋ ಮಾಡೋರು.. ಇನ್ನೊಂದು ರೂಲ್ಸ್ ಬ್ರೇಕ್ ಮಾಡೋರು.. ಮೂರನೆಯವರು ನನ್ ತರಹಾ.. ರೂಲ್ಸ್ ಮಾಡೋರು.. ಇದು ಪುನೀತ್ ಡೈಲಾಗ್.
ಅಭಿಮಾನಿಗಳಿಗೆ ಡೈಲಾಗ್, ಮೇಕಿಂಗ್‍ನಷ್ಟೇ ಥ್ರಿಲ್ ಕೊಟ್ಟಿರೋದು ಪುನೀತ್ ಲುಕ್. ಪುನೀತ್ ಅದೆಷ್ಟು ಯಂಗ್ ಆಗಿ ಕಾಣ್ತಿದ್ದಾರೆ ಅಂದ್ರೆ ಪುನೀತ್ ಅವರು ಹೀರೋ ಆಗಿ ನಟಿಸಿದ ಮೊದಲ ಚಿತ್ರ ಅಪ್ಪುಗಿಂತಲೂ ಯಂಗ್ ಆಗಿದ್ದಾರೆ. ಕ್ರೆಡಿಟ್ಟು ಸಂತೋಷ್ ಆನಂದ್‍ರಾಮ್ ಅವರದ್ದು. ವಿಜಯ್ ಕಿರಗಂದೂರು ಬ್ಯಾನರಿನಲ್ಲಿ ಬರುತ್ತಿರೋ ಯುವರತ್ನ ಮತ್ತೊಂದು ರಾಜಕುಮಾರ ಆಗಲಿ ಎನ್ನುವುದು ಹಾರೈಕೆ.