ನನ್ನ ದುಗುಡವನ್ನು ಅರ್ಥ ಮಾಡಿಕೊಂಡ ನಿರ್ಮಾಪಕ ಸೈಯದ್ ಸಲಾಂ ಅವರಿಗೆ ಧನ್ಯವಾದ. ಹೀಗೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ ನಟಿ ಶಾನ್ವಿ ಶ್ರೀವಾತ್ಸವ್. ನನ್ನ ಕಳಕಳಿಯ ಪ್ರಾರ್ಥನೆ ಗೀತಾ ಚಿತ್ರಕ್ಕಷ್ಟೇ ಸಂಬಂಧಿಸಿದ್ದಲ್ಲ ಎಂದಿರುವ ಶಾನ್ವಿ, ಚಿತ್ರ ಅಂತಿಮವಾಗಿ ಹೇಗೆ ಬರಬೇಕು ಎಂದು ನಿರ್ಧರಿಸುವುದು ಚಿತ್ರತಂಡ. ಬದಲಾವಣೆ ಮಾಡಿಕೊಂಡರೆ ಅದರ ಮಾಹಿತಿಯನ್ನು ನಮಗೆ ನೀಡಿ ಎನ್ನುವುದಷ್ಟೇ ನನ್ನ ಮನವಿ ಎಂದಿದ್ದಾರೆ ಶಾನ್ವಿ.
ಇದು ವಿವಾದವಾಗುವ ಎಲ್ಲ ನಿರೀಕ್ಷೆ ಇತ್ತಾದರೂ, ನಿರ್ಮಾಪಕ ಸೈಯದ್ ಸಲಾಂ, ಗಣೇಶ್, ನಿರ್ದೇಶಕ ವಿಜಯ್ ನಾಗೇಂದ್ರ ಅವರ ಸಂಯಮದ ಪ್ರತಿಕ್ರಿಯೆಯಿಂದಾಗಿ ಅಷ್ಟೇ ವೇಗವಾಗಿ ಕೂಲ್ ಆಗಿದೆ. ಇದೆಲ್ಲದರ ಮಧ್ಯೆ ಗೀತಾ ಚಿತ್ರ ಥಿಯೇಟರುಗಳಲ್ಲಿ ಸೌಂಡು ಮಾಡುತ್ತಿದೆ.