ದರ್ಶನ್ ಚಿತ್ರಗಳಿಗೆ ಹರಿಕೃಷ್ಣ ಮ್ಯೂಸಿಕ್ ಅನ್ನೋದು ಕಾಮನ್ ಆಗಿತ್ತು. ಭೂಪತಿ ನಂತರ ದರ್ಶನ್ ಅವರ ಬಹುತೇಕ ಚಿತ್ರಗಳಿಗೆ ಹರಿಕೃಷ್ಣ ಅವರದ್ದೇ ಮ್ಯೂಸಿಕ್. ಈಗ ಮತ್ತೊಮ್ಮೆ ಅರ್ಜುನ್ ಜನ್ಯಾ, ದರ್ಶನ್ ಚಿತ್ರದ ಸಂಗೀತ ನಿರ್ದೇಶಕರಾಗಿ ಬಂದಿದ್ದಾರೆ. ಅಂದಹಾಗೆ ಚಕ್ರವರ್ತಿ ಚಿತ್ರಕ್ಕೆ ಸಂಗೀತ ನೀಡಿದ್ದವರು ಅರ್ಜುನ್ ಜನ್ಯಾ ಅವರೇ.
ರಾಬರ್ಟ್ ಚಿತ್ರಕ್ಕೆ ಬಿಜಿಎಂ ಬೊಂಬಾಟಾಗಿರಬೇಕು ಎಜೆ ಎಂದು ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಡಿಮ್ಯಾಂಡ್ ಇಟ್ಟಾಗಿದೆ. ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶಕ. ತರುಣ್ ಮತ್ತು ಅರ್ಜುನ್ ಕಾಂಬಿನೇಷನ್‍ನಲ್ಲಿ ಒಳ್ಳೊಳ್ಳೆಯ ಹಿಟ್ ಹಾಡು ಬಂದಿವೆ. ಆನಂದ್ ಆಡಿಯೋದಲ್ಲಿ ರಾಬರ್ಟ್ ಚಿತ್ರದ ಹಾಡುಗಳು ಬರಲಿವೆ. ಉಮಾಪತಿ ನಿರ್ಮಾಣದ ರಾಬರ್ಟ್ ವರ್ಷಾಂತ್ಯದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.