` ಪ್ರಖ್ಯಾತ ಚಿತ್ರಸಂಸ್ಥೆ ಸತ್ಯಜ್ಯೋತಿ ಫಿಲಂಸ್ ಮತ್ತೆ ಕನ್ನಡಕ್ಕೆ : ಶಿವಣ್ಣ ಸಾಥ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathya jyothi films comes back to films
Shivarajkumar

ಸತ್ಯಜ್ಯೋತಿ, ಈ ಹೆಸರಿನದ್ದೊಂದು ಸಿನಿಮಾ ಕನ್ನಡದಲ್ಲಿ ಬಂದಿತ್ತು. 1986ರಲ್ಲಿ. ಸಿನಿಮಾ ಹೆಸರಿನಲ್ಲಿಯೇ ಬ್ಯಾನರ್ ಶುರುವಾಗಿತ್ತು. ಅದು ವಿಷ್ಣುವರ್ಧನ್, ಸುಮಲತಾ ಅಭಿನಯದ ಚಿತ್ರ. ಆದರೆ, ಅದಾದ ಮೇಲೆ ಆ ಸಂಸ್ಥೆ ಕನ್ನಡದಲ್ಲಿ ಸಿನಿಮಾ ಮಾಡಲೇ ಇಲ್ಲ. ತಮಿಳಿನಲ್ಲಿ ಬೃಹದಾಕಾರವಾಗಿ ಬೆಳೆಯಿತು. ಇತ್ತೀಚೆಗೆ ತಮಿಳಿನಲ್ಲಿ ಭರ್ಜರಿ ಸದ್ದು ಮಾಡಿದ ವಿಶ್ವಾಸಂ, ವಿವೇಗಂ, ಪಟಾಸ್ ಮೊದಲಾದ ಚಿತ್ರಗಳು ಈ ಸಂಸ್ಥೆಯ ಕೊಡುಗೆ. ಈ ಸಂಸ್ಥೆ ಬರೋಬ್ಬರಿ 3 ದಶಕಗಳ ಮತ್ತೆ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

ಸತ್ಯಜ್ಯೋತಿ ಸಂಸ್ಥೆಯ ಕನ್ನಡ ಚಿತ್ರದಲ್ಲಿ ಹೀರೋ ಶಿವರಾಜ್ ಕುಮಾರ್. ರವಿ ಅರಸು ನಿರ್ದೇಶನ ಮಾಡಲಿದ್ದು, ಶಿವಣ್ಣ ಇನ್ಸ್‍ಪೆಕ್ಟರ್ ಆಗಿ ರಂಜಿಸಲಿದ್ದಾರೆ. ಭಜರಂಗಿ-2 ಮುಗಿದ ನಂತರ ಶಿವಣ್ಣ ಸತ್ಯಜ್ಯೋತಿ ಪ್ರಾಜೆಕ್ಟ್‍ನಲ್ಲಿ ಬ್ಯುಸಿಯಾಗುವ ನಿರೀಕ್ಷೆ ಇದೆ.