ಪೈಲ್ವಾನ್, ಕಿಚ್ಚ ಸುದೀಪ್ ಅಭಿನಯದ ಚಿತ್ರಕ್ಕೆ ವಿಲನ್ ಆಗಿ ಕಾಡಿದ್ದು ಪೈರಸಿ. ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ, ಪೈರಸಿ ಕಾಟ ತಪ್ಪಿರಲಿಲ್ಲ. ಪೈರಸಿ ವಿರುದ್ಧ ಸಮರವನ್ನೇ ಸಾರಿದ್ದ ಚಿತ್ರ ತಂಡದಿಂದಾಗಿ ಕೆಲವರ ಬಂಧನವೂ ಆಯ್ತು. ಇದರ ನಡುವೆಯೂ ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದ ಪೈಲ್ವಾನ್, ಈಗ ಯಶಸ್ವಿ 25 ದಿನಗಳನ್ನು ಪೂರೈಸಿದೆ.
100ಕ್ಕೂ ಹೆಚ್ಚು ಥಿಯೇಟರ್, ಸ್ಕ್ರೀನ್‍ಗಳಲ್ಲಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ ಪೈಲ್ವಾನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ. ಮೊದಲ ಚಿತ್ರದಲ್ಲೇ ಭರ್ಜರಿ ಗೆಲುವಿನ ಸಿಹಿಯುಂಡಿದ್ದಾರೆ ಸ್ವಪ್ನಾ.