` ಗೀತಾ ಕೊಟ್ಟ ಆತ್ಮವಿಶ್ವಾಸ.. ಕನ್ನಡತಿಯಾದರು ಶಾನ್ವಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
geetha movie gave me confidence
Shanvi Srivatsav

ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ-ಪುಷ್ಕರ್ ಕಾಂಬಿನೇಷನ್ನಿನಲ್ಲಿ ಬರುತ್ತಿರೋ ಅತಿ ದೊಡ್ಡ ಸಿನಿಮಾ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಹೀರೋಯಿನ್. ಅವರು ಕಾಶಿಯ ಚೆಲುವೆ. ಕನ್ನಡ ಗೊತ್ತಿಲ್ಲ. ಆದರೆ ಗೀತಾ ಚಿತ್ರ ಕೊಟ್ಟಿರುವ ಕಾನ್ಫಿಡೆನ್ಸ್ ಹೇಗಿದೆ ಎಂದರೆ, ತಮ್ಮ ಚಿತ್ರಗಳಿಗೆ ತಾವೇ ಡಬ್ ಮಾಡೋಕೆ ಮುಂದಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಲಕ್ಷ್ಮಿ ಪಾತ್ರಕ್ಕೂ ಅವರೇ ಡಬ್ ಮಾಡಿದ್ದಾರೆ.

ಗೀತಾ ಚಿತ್ರದಲ್ಲಿನ ಅವರ ವಾಯ್ಸ್‍ಗೆ ಸಿಕ್ಕ ಮೆಚ್ಚುಗೆಯೇ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಡಬ್ ಮಾಡಲು ಪ್ರೇರಣೆ ನೀಡಿದೆಯಂತೆ. ಡೈಲಾಗ್‍ಗಳು ಉದ್ದುದ್ದ ಇದ್ದವು. ಶೂಟಿಂಗ್ ವೇಳೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಈಗ ಡಬ್ ಮಾಡಿದ್ದೇನೆ. ನನಗೀಗ ಕನ್ನಡ ಚೆನ್ನಾಗಿಯೇ ಬರುತ್ತೆ ಎನ್ನುವ ಶಾನ್ವಿ ಶ್ರೀವಾಸ್ತವ್, ಈಗ ಕಾಶಿ ಹುಡುಗಿಯೇನಲ್ಲ. ಕನ್ನಡತಿಯೇ.