ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲ ಶಕ್ತಿಯೇ ಕಾಮಿಡಿ. ಇಡೀ ಚಿತ್ರ ನಡೆಯುವುದೇ ಹಾಸ್ಯದ ಮೇಲೆ. ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್ ಇದು. ಅಧ್ಯಕ್ಷರಾಗಿರೋದು ಶರಣ್. ಅವರಿಗೆ ಜೋಡಿಯಾಗಿರೋದು ರಾಗಿಣಿ ದ್ವಿವೇದಿ. ಹಾಗಂತ ಯೋಗಾನಂದ್ ಮುದ್ದಾನ್ ಶರಣ್-ರಾಗಿಣಿ ಜೋಡಿಗಷ್ಟೇ ಸೀಮಿತವಾಗಿಲ್ಲ. ಇಡೀ ಚಿತ್ರದಲ್ಲಿ ಮರಿ ಅಧ್ಯಕ್ಷರ ದಂಡೇ ಇದೆ.
ಸ್ವತಃ ಯೋಗಾನಂದ್ ಮುದ್ದಾನ್ ಕಾಮಿಡಿ ಚಿತ್ರಗಳಿಗೆ ಸಂಭಾಷಣೆ ಬರೆಯುವುದಕ್ಕೆ ಹೆಸರುವಾಸಿಯಾಗಿದ್ದವರು. ಇವರ ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ ಕೂಡಾ ಇದ್ದಾರೆ. ಒಬ್ಬೊಬ್ಬರೂ ನಕ್ಕು ನಗಿಸೋಕೇ ಫೇಮಸ್.
ಇಷ್ಟೆಲ್ಲಾ ಆಗಿಯೂ ಚಿತ್ರದಲ್ಲಿರೋದು ಡೈಲಾಗ್ ಕಾಮಿಡಿಗಿಂತ ಸಿಚುಯೇಷನ್ ಕಾಮಿಡಿ. ಸೀನ್ ನೋಡ್ತಾ ನೋಡ್ತಾನೇ ನಗ್ತಾ ಇರ್ತೀರಿ ಅನ್ನೋದು ಶರಣ್ ಕಾನ್ಫಿಡೆನ್ಸಿನ ಮಾತು. ಜಸ್ಟ್ ಎಂಜಾಯ್ ದಿಸ್ ವೀಕ್.