ನವರಸ ನಾಯಕ ಜಗ್ಗೇಶ್ ರಂಗನಾಯಕರಾಗುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಇಬ್ಬರು ರಂಗನಾಯಕಿಯರಿದ್ದಾರೆ. ಒಬ್ಬರು ಆರತಿ, ಇನ್ನೊಬ್ಬರು ಆದಿತಿ. ಈಗ ರಂಗನಾಯಕ. ಜಗ್ಗೇಶ್‍ರನ್ನು ರಂಗನಾಯಕರನ್ನಾಗಿಸಿರುವುದು ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಿರ್ದೇಶಕ ಗುರು ಪ್ರಸಾದ್. ದಶಕಗಳ ನಂತರ ಇಬ್ಬರೂ ಮತ್ತೆ ಒಗ್ಗೂಡಿದ್ದಾರೆ.
ಹಿಟ್ ಜೋಡಿಯನ್ನು ಒಂದುಗೂಡಿಸಿದ ಕೀರ್ತಿ ಪುಷ್ಪಕವಿಮಾನ ಚಿತ್ರ ನಿರ್ಮಿಸಿದ್ದ ವಿಖ್ಯಾತ್ ಅವರದ್ದು. ಗುರುಪ್ರಸಾದ್ ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಎನಿಸಿತು. ಈಗ ನಮ್ಮ ಬ್ಯಾನರ್‍ನಲ್ಲಿ ಅವರು ಹ್ಯಾಟ್ರಿಕ್ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಕಥೆ ಮಜವಾಗಿದೆ ಎಂದಿದ್ದಾರೆ ವಿಖ್ಯಾತ್.