2009ರಲ್ಲಿ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಿಂದ ಬೆಳ್ಳಿತೆರೆಗೆ ಬಂದಿದ್ದ ನಿಧಿ ಸುಬ್ಬಯ್ಯ 3 ವರ್ಷಗಳ ಹಿಂದೆ ಕನ್ನಡ ಬೆಳ್ಳಿತೆರೆಯಿಂದ ದೂರವಾಗಿದ್ದರು. ಬಹುಶಃ ಅಣ್ಣಾಬಾಂಡ್ ಚಿತ್ರವೇ ಕೊನೆಯಿರಬೇಕು. ಅದಾದ ಮೇಲೆ ನಿಧಿ ಕನ್ನಡದಲ್ಲಿ ನಟಿಸಿರಲಿಲ್ಲ. ಬಾಲಿವುಡ್ ಸೇರಿಕೊಂಡಿದ್ದರು. ಈ 3 ವರ್ಷಗಳ ನಂತರ ಆಯುಷ್ಮಾನ್ ಭವ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ ನಿಧಿ.
ಪಿ. ವಾಸು ನಿರ್ದೇಶನದ ಆಯುಷ್ಮಾನ್ಭವದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನನಗೆ ತವರು ಮನೆಗೆ ವಾಪಸ್ ಆದಂತೆ ಭಾಸವಾಗುತ್ತಿದೆ. ಇದು ನನ್ನ ಕಮ್ ಬ್ಯಾಕ್ ಸಿನಿಮಾ ಅಲ್ಲ. ಸ್ಟೇ ಬ್ಯಾಕ್ ಸಿನಿಮಾ ಎಂದಿದ್ದಾರೆ ನಿಧಿ. ಶಿವರಾಜ್ ಕುಮಾರ್ ಎದುರು ಗ್ಲಾಮರಸ್ ಹಳ್ಳಿ ಹುಡುಗಿಯಾಗಿ ನಟಿಸಿರುವ ನಿಧಿ, ನನ್ನನ್ನು ಕನ್ನಡ ಪ್ರೇಕ್ಷಕರು ಮರೆತಿಲ್ಲ. ಮತ್ತೆ ಅಂತಹುದೇ ಸ್ವಾಗತ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.