` ಸೋತಾಗ ನಾನಿದ್ದೇನೆ ಎಂದು ಬಂದ ಶಿವಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogi dwarkish talks about ayushman bhava
Shivarajkumar, Yogi Dwarkish Image

ಒಂದು ಸಿನಿಮಾ ಗೆದ್ದಾಗ ಹತ್ತಿರ ಬರುವವರೇ ಬೇರೆ.. ಆದರೆ, ಸೋತ ಬೇಸರದಲ್ಲಿರುವವರಿಗೆ ನಾನಿದ್ದೇನೆ ಎಂದು ಧೈರ್ಯ ತುಂಬುವುದೇ ಬೇರೆ. ದ್ವಾರಕೀಶ್ ಬ್ಯಾನರಿನಲ್ಲಿ ಬಂದ ಅಮ್ಮ ಐ ಲವ್ ಯು ಸಿನಿಮಾ, ಆ ಸಿನಿಮಾದ ಕಥೆ, ಸಂದೇಶ ಎಲ್ಲದರ ಬಗ್ಗೆಯೂ ಒಳ್ಳೆಯ ರಿವ್ಯೂ ಬಂತಾದರೂ ಬಾಕ್ಸಾಫೀಸ್‍ನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅದೇ ಬೇಸರದಲ್ಲಿದ್ದವರಿಗೆ ತಕ್ಷಣ ನೆನಪಾಗಿದ್ದು ಶಿವರಾಜ್ ಕುಮಾರ್.

ಅಮ್ಮ ಐ ಲವ್ ಯು ಚಿತ್ರದ ಆಡಿಯೋ ರಿಲೀಸ್ ಮಾಡಿದ್ದ ಶಿವಣ್ಣ, ದ್ವಾರಕೀಶ್ ಬ್ಯಾನರ್‍ನಲ್ಲಿ ಸಿನಿಮಾ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದರು. ಅದನ್ನು ನೆನಪಿಸಿಕೊಂಡು ಶಿವಣ್ಣರನ್ನು ಕಾಂಟ್ಯಾಕ್ಟ್ ಮಾಡಿದಾಗ ಯೆಸ್ ಎಂದ ಶಿವಣ್ಣ, ಪಿ.ವಾಸು ಅವರ ಕಥೆ ಕೇಳಿದ್ದ ಶಿವಣ್ಣ, ಅದನ್ನೇ ಸಿನಿಮಾ ಮಾಡಿ ಎಂದು ಯೋಗೀಶ್ ದ್ವಾರಕೀಶ್ ಅವರಿಗೆ ಹೇಳಿದರಂತೆ.

ಗೆದ್ದಾಗ ಚಾನ್ಸ್ ಕೊಡುವುದು ಬೇರೆ. ಸೋತವರಿಗೆ ಅವಕಾಶ ಕೊಡುವುದು ಬೇರೆ ಎನ್ನುವ ಯೋಗೀಶ್ ದ್ವಾರಕೀಶ್, ಶಿವರಾಜ್ ಕುಮಾರ್ ಗುಣವನ್ನು ಕೊಂಡಾಡಿದ್ದಾರೆ. ಕೇವಲ 20 ನಿಮಿಷದಲ್ಲಿ ಇಡೀ ಮಾತುಕತೆ ಮುಗಿಸಿದ್ದರಂತೆ ಶಿವಣ್ಣ. ಅದೇ ಆಯುಷ್ಮಾನ್ ಭವ ಆಗಿ ರಿಲೀಸ್ ಆಗೋಕೆ ರೆಡಿಯಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery