ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಶೂಟಿಂಗ್ ಹಂತದಲ್ಲೇ ನಿರೀಕ್ಷೆ ಹುಟ್ಟಿಸಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ನಿರ್ಮಾಪಕರು. ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿ ಬಾಬು ಕೂಡಾ ನಟಿಸುತ್ತಿದ್ದಾರೆ. ಆಶಾ ಭಟ್, ಚಿತ್ರದ ನಾಯಕಿ. ದರ್ಶನ್ ಚಿತ್ರಗಳು ಇರೋದೇ ದಾಖಲೆ ಸೃಷ್ಟಿಸೋಕೆ ಎನ್ನುವಂತೆ ರಾಬರ್ಟ್ ಚಿತ್ರವೂ ಬರೆದಿದೆ.
ರಾಬರ್ಟ್ ಚಿತ್ರದ ಆಡಿಯೋ ಹಕ್ಕುಗಳನ್ನು ಅನಂದ ಆಡಿಯೋ ಸಂಸ್ಥೆ ಖರೀದಿಸಿದೆ. ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ, ಆ ಮೊತ್ತ ಎಷ್ಟು ಎನ್ನುವುದನ್ನು ಅನಂದ ಆಡಿಯೋ ಹೇಳಿಲ್ಲ.