ಅಂಬರೀಷ್ ಪುತ್ರ ಅಭಿಷೇಕ್ ಇದೇ ಅಕ್ಟೋಬರ್ 3ಕ್ಕೆ 25 ವರ್ಷ ಪೂರೈಸಿ, 26ಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇಲ್ಲದೇ ಇದ್ದರೂ, ಅಂಬರೀಷ್ ಅಭಿಮಾನಿಗಳು ಅಂಬಿ ಮನೆಗೆ ಮುತ್ತಿಗೆ ಹಾಕಿ, ಅಂಬಿ ಪುತ್ರನಿಗೆ ಶುಭಾಶಯ ಹೇಳಿ ಹೋಗುತ್ತಿದ್ದರು. ಕಳೆದ ವರ್ಷವಂತೂ ಹಬ್ಬವನ್ನೇ ಮಾಡಿದ್ದರು. ಆದರೆ, ಈ ವರ್ಷ ಆ ಸಡಗರ ಇಲ್ಲ. ಹೀಗಾಗಿಯೇ ಅಭಿಷೇಕ್ ಅಂಬರೀಷ್ ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.
ನನ್ನನ್ನು ಚಿಕ್ಕಂದಿನಿಂದಲೂ ಅಭಿಮಾನದಿಂದ ಪ್ರೀತಿಸಿದ್ದೀರಿ. ಆಶೀರ್ವಾದ ಮಾಡಿ ಬೆಳೆಸಿದ್ದೀರಿ. ಆದರೆ, ಈ ವರ್ಷವೇ ತಂದೆಯನ್ನು ಕಳೆದುಕೊಂಡಿರುವುದರಿಂದ ನನ್ನ ಹುಟ್ಟುಹಬ್ಬ ಆಚರಣೆ ಬೇಡ. ನಿಮ್ಮ ನಮ್ಮ ನಮ್ಮ ಊರುಗಳಲ್ಲಿಯೇ ಅಪ್ಪಾಜಿಯ ಹೆಸರಲ್ಲಿ ಒಂದು ಗಿಡ ನೆಟ್ಟು, ಗೌರವ ಸಲ್ಲಿಸೋಣ ಎಂದು ಮನವಿ ಮಾಡಿದ್ದಾರೆ ಅಭಿಷೇಕ್.