ಗೀತಾ ಚಿತ್ರದ ಟ್ರೇಲರ್ ಮಾಸ್ ಮತ್ತು ಕ್ಲಾಸ್ ಆಗಿದೆ. ಪ್ರೀತಿ, ಪ್ರೇಮ, ಚಳವಳಿಯ ಕಿಚ್ಚು, ಕೆಚ್ಚೆದೆಯ ಕನ್ನಡಿಗನ ರೊಚ್ಚು ಎಲ್ಲವೂ ಇರುವ ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸುತ್ತದೆ. ಚಿತ್ರದ ಕಾನ್ಸೆಪ್ಟ್ ಏನಿರಬಹುದು ಎಂಬ ನಿರೀಕ್ಷೆ ಹುಟ್ಟಿಸುತ್ತದೆ. ಕಿಚ್ಚನಿಗೆ ಆಗಿರುವುದು ಕೂಡಾ ಅದೇ.
ಟ್ರೇಲರ್ ನೋಡಿದೆ.ಉತ್ತಮವಾಗಿದೆ. ಕಾನ್ಸೆಪ್ಟ್ ಚೆನ್ನಾಗಿದೆ. 27ಕ್ಕೆ ರಿಲೀಸ್ ಆಗುತ್ತಿರುವ ಗೀತಾ ಚಿತ್ರಕ್ಕೆ ಶುಭ ಹಾರೈಕೆ ಎಂದಿದ್ದಾರೆ ಸುದೀಪ್.
ಗಣೇಶ್ ಜೊತೆ ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್, ಸುಧಾರಾಣಿ ನಟಿಸಿದ್ದು, ವಿಜಯ್ ನಾಗೇಂದ್ರ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಗಣೇಶ್ ಮತ್ತು ಸೈಯದ್ ಸಲಾಂ ಚಿತ್ರದ ನಿರ್ಮಾಪಕರು.