ಕಿಸ್ ಎಂದರೇನು..? ಅಯ್ಯೋ ಅಷ್ಟು ಗೊತ್ತಿಲ್ವಾ.. ಮುತ್ತು. ಇಷ್ಟೂ ಗೊತ್ತಿಲ್ದೇ ಪ್ರಶ್ನೆ ಕೇಳ್ತೀರಲ್ಲ. ಗೊತ್ತಿಲ್ಲ ಅಂದ್ರೆ ಹೋಗಿ ಎ.ಪಿ.ಅರ್ಜುನ್ ಅವರನ್ನೇ ಕೇಳಿ. ಅದೇ ಹೆಸರಲ್ಲಿ ಒಂದ್ ಸಿನಿಮಾನೇ ಮಾಡಿದ್ದಾರೆ ಅನ್ನೋ ಉತ್ತರ ನಿಮ್ಮದಾಗಿದ್ದರೆ... ವೇಯ್ಟ್. ಎ.ಪಿ.ಅರ್ಜುನ್ ಅವರೇ ಕಿಸ್ ಅನ್ನೋದ್ರ ಅರ್ಥವನ್ನ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾರೆ.
ಏISS ಅಂದ್ರೆ ಕೀಪ್ ಇಟ್ ಶಾರ್ಟ್ & ಸ್ವೀಟ್ ಅಂತೆ. ಅದು ಚಿತ್ರದಲ್ಲಿ ಅವರು ಹೇಳಿರೋ ಕಿಸ್. ವಿರಾಟ್, ಶ್ರೀಲೀಲಾ ಜೊತೆಯಾಗಿ ನಟಿಸಿರುವ ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ಅರ್ಜುನ್ ಚಿತ್ರಗಳಲ್ಲಿ ಸಹಜವಾಗಿ ಆಗುವಂತೆ ಹಾಡುಗಳೆಲ್ಲ ಮೆಲೋಡಿ ಹಿಟ್. ಚಿತ್ರದ ಟೈಟಲ್‍ನಲ್ಲಿ ಕಿಸ್ ಇದ್ದರೂ, ಇದೊಂದು ಫ್ಯಾಮಿಲಿ ಸಿನಿಮಾ ಅನ್ನೋ ಭರವಸೆ ಚಿತ್ರತಂಡದ್ದು.