ಕಾಣದಂತೆ ಮಾಯವಾದನು ಹಾಡಿಗೂ ಪುನೀತ್ ರಾಜ್‍ಕುಮಾರ್‍ಗೂ ಅದೇನೋ ಬಿಡಿಸಲಾಗದ ನಂಟು. ಪುನೀತ್ ಬಾಲನಟನಾಗಿದ್ದಾಗ ಹಾಡಿದ್ದ ಈ ಹಾಡು ಇಂದಿಗೂ ಜನಪ್ರಿಯ. ಅದೇ ಹಾಡನ್ನು ಅವರದ್ದೇ ಅಭಿನಯದ ಅಣ್ಣಾ ಬಾಂಡ್ ಚಿತ್ರದಲ್ಲಿ ರಾಕ್ ಶೈಲಿಯಲ್ಲಿ ಬಳಸಿಕೊಳ್ಳಲಾಗಿತ್ತು. ಒನ್ಸ್ ಎಗೇಯ್ನ್ ಪುನೀತ್ ಅವರೇ ಹಾಡಿದ್ದರು. ಈಗ ಮತ್ತೊಮ್ಮೆ ಪುನೀತ್ ಅವರನ್ನು ಕಾಣದಂತೆ ಮಾಯವಾದನು ಹಿಂಬಾಲಿಸಿಕೊಂಡು ಬಂದಿದೆ.
ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ ಆಗಿ ನಟಿಸಿರುವ ಮೊದಲ ಚಿತ್ರ ಕಾಣದಂತೆ ಮಾಯವಾದನು. ಈ ಚಿತ್ರದಲ್ಲಿ ಕಳೆದೋದಾ ಕಾಳಿದಾಸ.. ಅನ್ನೋ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ ಪುನೀತ್. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದೆ. ವಿಕಾಸ್ ಎದುರು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿದ್ದಾರೆ.