ನಟ ಧ್ರುವ ಸರ್ಜಾ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಹತ್ತಿ ಆಂಜನೇಯನ ದರ್ಶನ ಪಡೆದಿದ್ದಾರೆ. ಆಂಜನೇಯನ ಪರಮಭಕ್ತರಾಗಿರುವ ಧ್ರುವ, ಆಂಜನೇಯನನ್ನು ಕರೆಯೋದು ನಮ್ಮ ಬಾಸ್ ಅಂತಲೇ. ಈ ಬೆಟ್ಟ ಹತ್ತಿ ದೇವರ ದರ್ಶನ ಪಡೆಯೋಕೆ 575 ಮೆಟ್ಟಿಲು ಹತ್ತಬೇಕು.
`ಎಷ್ಟು ಮೆಟ್ಟಿಲು ಹತ್ತಿದೆ ಎಂದು ಗೊತ್ತಿಲ್ಲ. ನಮ್ ಬಾಸ್ ದರ್ಶನಕ್ಕೆ ಇನ್ನೂ ಅಷ್ಟುಮೆಟ್ಟಿಲು ಹತ್ತ ಬೇಕೆಂದರೂ ಹತ್ತುತ್ತೇನೆ. ಈ ದೇವಸ್ಥಾನದಲ್ಲಿ ಏನೋ ಒಂದು ಪಾಸಿಟಿವ್ ಎನರ್ಜಿ ಇದೆ. ಇದು ಆಂಜನೇಯ ಹುಟ್ಟಿದ ಜಾಗ. ಹೀಗಾಗಿ ಬೇರೆಯದ್ದೇ ಅನುಭವವಾಗುತ್ತಿದೆ' ಎಂದಿದ್ದಾರೆ ಧ್ರುವ ಸರ್ಜಾ.
ಅಂಜನಾದ್ರಿ ದರ್ಶನ ಮುಗಿಸಿದ ನಂತರ ಹುಲಿಗೆಮ್ಮ ತಾಯಿಯ ದರ್ಶನವನ್ನೂ ಪಡೆದಿದ್ದಾರೆ. ಬಳ್ಳಾರಿ ಹೊರವಲಯದಲ್ಲಿ ಹೋಗುವಾಗ ಕಾರು ಅಪಘಾತಕ್ಕೀಡಾದರೂ ದೇವರ ದರ್ಶನ ನಿಲ್ಲಿಸದೆ ದರ್ಶನ ಮುಗಿಸಿದ್ದಾರೆ ಧ್ರುವ ಸರ್ಜಾ