ನಂದಿನಿ. ಆ ಹೆಸರಿಗೂ ಕನ್ನಡ ಚಿತ್ರಗಳಿಗೂ ಅದೇನೋ ನಂಟಿದೆ. ಬಹುಶಃ ಇದು ಬಂಧನ ಚಿತ್ರದಿಂದ ಶುರುವಾಗಿದ್ದಿರಬೇಕು. ಆ ಚಿತ್ರದಲ್ಲಿ ಸುಹಾಸಿನಿ ಪಾತ್ರದ ಹೆಸರು ನಂದಿನಿ. ಬಂಧನ ಸಕ್ಸಸ್ ಆಯ್ತಾ..? ಪ್ರಶ್ನೆ ಕೇಳೋದೇ ತಪ್ಪು.. ತಪ್ಪು.. ಇನ್ನು ನಂದಿನಿ ಪಾತ್ರದ ಹೆಸರಿನ ಖ್ಯಾತಿ ಮುಗಿಲು ಮುಟ್ಟಿದ್ದು ಮುಂಗಾರು ಮಳೆಯಲ್ಲಿ. ಕನ್ನಡದ ಹಲವಾರು ಹಿಟ್ ಚಿತ್ರಗಳಲ್ಲಿ ನಾಯಕಿಯ ಪಾತ್ರದ ಹೆಸರು. ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ನಂದಿನಿಯೂ ಒಂದು. ಇನ್ನು ಕನ್ನಡಿಗರಿಗೆ ಪ್ರತಿದಿನ ಮುಂಜಾನೆ ಬೆಳಗಾಗುವುದು ನಂದಿನಿ ಹಾಲಿನಿಂದಲೇ..
ಈಗ ಮತ್ತೆ ನಂದಿನಿ ಬರುತ್ತಿದ್ದಾರೆ. ಕಿಸ್ ಸಿನಿಮಾದಲ್ಲಿ.
ಕಿಸ್ ಚಿತ್ರದಲ್ಲಿ ನಾಯಕಿ ಶ್ರೀಲೀಲಾ ಪಾತ್ರದ ಹೆಸರು ನಂದಿನಿ. ಅದು ಬಬ್ಲಿ ಕ್ಯಾರೆಕ್ಟರ್. ಹಣದಿಂದ ಏನನ್ನಾದರೂ ಖರೀದಿಸಬಲ್ಲೆ ಎಂಬ ನಾಯಕನನ್ನು ಲವ್ ಮಾಡುವ ಹುಡುಗಿ. ಎ.ಪಿ.ಅರ್ಜುನ್ ಒಂದು ಫ್ರೆಶ್ ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ. ಇದೇ ಶುಕ್ರವಾರ ಕಿಸ್ ಕೊಡೋಕೆ ರೆಡಿಯಾಗಿ.