ಸಾಮಾನ್ಯವಾಗಿ ನಿರ್ದೇಶನಕ್ಕಿಳಿಯುವವರು ತಾರಾಗಣಕ್ಕೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ತಾರೆ. ಯುವ ನಿರ್ದೇಶಕರಿಗೆ ಸ್ಟಾರ್ ತಾರಾಗಣ ಸಿಗುವುದು ಬಹಳ ಅಪರೂಪ. ಆದರೆ, ಎ.ಪಿ.ಅರ್ಜುನ್ ವಿಚಾರದಲ್ಲಿ ಹಾಗಲ್ಲ. ಅವರು ನಿರ್ದೇಶಿಸಿದ ಮೊದಲ ಚಿತ್ರ ಅಂಬಾರಿ.
ಅಂಬಾರಿಯಲ್ಲಿ ಲೂಸ್ ಮಾದ ಖ್ಯಾತಿಯ ಯೋಗೀ ಹೀರೋ ಆಗಿದ್ದರು. ಚಿತ್ರರಂಗದಲ್ಲಿ ಗುರುತಿಸಿಕೊಂಡು, ಅಷ್ಟೊತ್ತಿಗಾಗಲೇ ಒಂದು ಹಿಟ್ ಕೊಟ್ಟಿದ್ದರೂ.. ಹೊಸಬರ ಕೆಟಗರಿಯಲ್ಲೇ ಇದ್ದವರು. ನಾಯಕಿ ಸುಪ್ರೀತಾ ಹೊಸ ಪರಿಚಯ. ಅಂಬಾರಿ ಸೂಪರ್ ಹಿಟ್.
ಅದಾದ ಮೇಲೆ ಅರ್ಜುನ್ ನಿರ್ದೇಶಿಸಿದ ಸಿನಿಮಾ ಅದ್ಧೂರಿ. ಅದು ಧ್ರುವ ಸರ್ಜಾ ಅನ್ನೋ ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಾಕಿದ ಸಿನಿಮಾ.
ಅದಾದ ಮೇಲೆ ರಾಟೆ ಚಿತ್ರ ನಿರ್ದೇಶಿಸಿದರು. ಅದು ಧನಂಜಯ್ ಮತ್ತು ಶೃತಿ ಹರಿಹರನ್ ನಟಿಸಿದ್ದ ಸಿನಿಮಾ. ಅದನ್ನು ಬಿಟ್ಟರೆ ಅರ್ಜುನ್ ನಿರ್ದೇಶಿಸಿದ ಚಿತ್ರ ಐರಾವತ.
ಹೀಗೆ ಹೊಸಬರನ್ನಿಟ್ಟುಕೊಂಡು ಬಂದಾಗಲೆಲ್ಲ ಅರ್ಜುನ್ ಗೆದ್ದಿದ್ದಾರೆ. ಈಗ ಮತ್ತೊಮ್ಮೆ ಹೊಸ ಪರಿಚಯದವರನ್ನೇ ಇಟ್ಟುಕೊಂಡು ಸಕ್ಸಸ್ಸಿಗೆ ಕಿಸ್ ಕೊಡಲು ಹೊರಟಿದ್ದಾರೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಇಬ್ಬರಿಗೂ ಇದು ಮೊದಲ ಸಿನಿಮಾ. ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವುದು ಧ್ರುವ ಸರ್ಜಾ.