ಕಿಸ್. ಎ.ಪಿ.ಅರ್ಜುನ್ ನಿರ್ದೇಶನದ ಹೊಸ ಸಿನಿಮಾ. ಎ.ಪಿ. ಅರ್ಜುನ್‍ಗೆ ಈ ಬಾರಿ ಭರ್ಜರಿ ಸಕ್ಸಸ್ಸಿನ ನಿರೀಕ್ಷೆಯಿದೆ. ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಮೆಡಿಕಲ್ ಸ್ಟೂಡೆಂಟ್. ಇದು ಅವರ ಮೊದಲ ಚಿತ್ರ. ಇಷ್ಟಕ್ಕೂ ಶ್ರೀಲೀಲಾ ನಾಯಕಿಯಾಗಿದ್ದು ಹೇಗೆ..? ಅಲ್ಲಿದೆ ಒಂದು ವಿಡಿಯೋ ಸ್ಟೋರಿ.
ಅರ್ಜುನ್ ಅವರಿಗೆ ಶ್ರೀಲೀಲಾ ಇಷ್ಟವಾಗಿದ್ದು ಒಂದು ಫೋಟೋದಲ್ಲಿ. ಅದು ಕ್ಯಾಮೆರಾಮನ್ ಭುವನ್ ಗೌಡ, ಪ್ರತಿವರ್ಷದಂತೆ ಶ್ರೀಲೀಲಾ ಅವರ ಫ್ಯಾಮಿಲಿ ಫೋಟೋ ಶೂಟ್ ಮಾಡಿದ್ದಾರೆ. ಅದನ್ನು ಫೇಸ್‍ಬುಕ್‍ನಲ್ಲಿ ನೋಡಿದ ಅರ್ಜುನ್ ಅವರಿಗೆ ಶ್ರೀಲೀಲಾ ಓಕೆ ಎನಿಸಿದ್ದಾರೆ. ಇದರ ಜೊತೆ ಒಂದು ವಿಡಿಯೋ ಕಥೆಯೂ ಇದೆ.
ಶ್ರೀಲೀಲಾ ಅವರ ಮನೆಯಲ್ಲಿನ ಅಕ್ವೇರಿಯಂನಲ್ಲಿ ಬೆಟಾಫಿಶ್ ಅನ್ನೋ ಮೀನಿತ್ತಂತೆ. ಒಂದ್ ದಿನ ಅಕ್ವೇರಿಯಂನಲ್ಲಿ ಆ ಮೀನು ಸೈಲೆಂಟ್ ಆಗಿತ್ತು. ಅಕ್ವೇರಿಯಂ ಒಳಗೇ ಕೈ ಹಾಕಿದ್ರೂ ನೋ ರಿಯಾಕ್ಷನ್. ಏನಾದ್ರೂ ಆಗೋಯ್ತೋ ಏನೋ ಎಂಬ ಬೇಜಾರಿನಲ್ಲಿ ಮೀನಿನ ಜೊತೆ ಮಾತನಾಡಿದ್ರಂತೆ ಶ್ರೀಲೀಲಾ. ಅದನ್ನು ಅವರ ತಾಯಿ ವಿಡಿಯೋ ಶೂಟ್ ಮಾಡಿದ್ದಾರೆ.
ತಾಯಿ ವಿಡಿಯೋ ಮಾಡಿದ್ದನ್ನು ನೋಡಿದ ಶ್ರೀಲೀಲಾ `ನಾನು ಬೇಜಾರಲ್ಲಿದ್ರೆ ನೀನು ವಿಡಿಯೋ ಮಾಡ್ತೀರಾ.. ಸಮಾಧಾನ ಮಾಡೊಲ್ವಾ..' ಎಂದಿದ್ದಾರೆ. ಅಷ್ಟು ಹೊತ್ತಿಗೆ ಮೀನು ಆಕ್ಟಿವ್ ಆಗಿದೆ.
ಅದಾದ ಮೇಲೆ ನಾನು ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗಬೇಕು. ದುಡ್ಡು ಕೊಡು ಎಂದು ದುಡ್ಡು ಪಡೆದು ಹೋಗಿದ್ದಾರೆ. ಇದೆಲ್ಲವನ್ನೂ ನೋಡಿದ ಅರ್ಜುನ್ ಅವರಿಗೆ ಶ್ರೀಲೀಲಾ ಅವರ ಚೇಂಜ್ ಓವರ್ ಇಷ್ಟವಾಗಿದೆ. ಜೊತೆಗೆ ಬ್ಯಾಲೆ, ಭರತನಾಟ್ಯವೂ ಗೊತ್ತಿದ್ದ ಕಾರಣ, ನಟನೆಯೂ ಸಲೀಸಾಗಿದೆ. ಈಗ ಮೊದಲ ಪರೀಕ್ಷೆ ರಿಸಲ್ಟ್ ನೋಡುವ ಸಮಯ. ಸೆ.27ಕ್ಕೆ ಕಿಸ್ ರಿಲೀಸ್ ಆಗುತ್ತಿದೆ.