ಯುವರತ್ನ ಚಿತ್ರಕ್ಕೆ ಅಭಿಮಾನಿಗಳು ಅದೆಷ್ಟು ಕಾತರದಿಮದ ಕಾಯುತ್ತಿದ್ದಾರೆಂದರೆ, ನಿರ್ದೇಶಕರಿಗೇ ಟೆನ್ಷನ್ ಶುರುವಾಗಿದೆ. ಅಭಿಮಾನಿಗಳೇ ಒಂದು ರಿಲೀಸ್ ಡೇಟ್ ಫಿಕ್ಸ್ ಮಾಡಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಿಟ್ಟಿನಲ್ಲಿ ನಿರ್ದೇಶಕರಿಗೇ ಮೆಸೇಜ್ ಮಾಡುತ್ತಿದ್ದಾರೆ. ಹಾಗೆಲ್ಲ ಮಾಡಬೇಡಿ, ಒಳ್ಳೆಯ ಸಿನಿಮಾ ಬರಲಿದೆ ಎಂದು ಹೇಳಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಥೆಯ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.
ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ, ವೃದ್ಧಾಶ್ರಮದ ಕಥೆಯಿತ್ತು. ಯುವರತ್ನ ಚಿತ್ರದಲ್ಲಿ ಎಜುಕೇಷನ್ ಮಾಫಿಯಾ ಹಾಗೂ ಅದರ ವಿರುದ್ಧ ನಾಯಕ ಹೇಗೆಲ್ಲ ಹೋರಾಡುತ್ತಾನೆ ಎನ್ನುವ ಕಥೆಯಿದೆ. ಈ ಮಾಫಿಯಾದಿಂದಾಗಿಯೇ ಹೈಯರ್ ಎಜುಕೇಷನ್ ಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ಕಥೆಯನ್ನು ಕಟ್ಟಿಕೊಟ್ಟಿದ್ದೇವೆ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.
ಹೀರೋ ಪುನೀತ್, ಡೈರೆಕ್ಟರ್ ಸಂತೋಷ್ ಮತ್ತು ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ರಾಜಕುಮಾರ ನಂತರ ಜೊತೆಯಾಗಿರುವ ತ್ರಿಮೂರ್ತಿಗಳ ಜೋಡಿ. ಜೊತೆಗೆ ಅತಿ ದೊಡ್ಡ ತಾರಾಬಳಗ. ದಸರಾಗೆ ಟೀಸರ್ ಬಿಡುತ್ತಿರುವ ಚಿತ್ರತಂಡ, ರಿಲೀಸ್ ಡೇಟ್‍ನ್ನು ಇನ್ನೂ ಅನೌನ್ಸ್ ಮಾಡಿಲ್ಲ.