` ಮತ್ತೆ ಬರ್ತಾನೆ ಉಪೇಂದ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra movie to re release
Upendra

20 ವರ್ಷಗಳ ಹಿಂದೆ ಭಾರತೀಯ ಚಲನಚಿತ್ರರಂಗದಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ ಉಪೇಂದ್ರ. ಮಡಿವಂತರು ಮೂಗು ಮುರಿದಿದ್ದ, ಯುವಕರನ್ನು ಥ್ರಿಲ್ಲಾಗಿಸಿದ್ದ.. ಹೀಗೂ ಸಿನಿಮಾ ಮಾಡಬಹುದೇ ಎಂದು ಚಿತ್ರ ಪಂಡಿತರು ಹುಬ್ಬೇರುವಂತೆ ಮಾಡಿದ್ದ ಸಿನಿಮಾ ಉಪೇಂದ್ರ.

ಉಪೇಂದ್ರ ಅವರೇ ನಿರ್ದೇಶಕ. ನಾಯಕ. ನಾಯಕನ ಹೆಸರು ನಾನು. ಪ್ರೇಮಾ, ರವೀನಾ ಟಂಡನ್, ದಾಮಿನಿ ನಟಿಸಿದ್ದ ಚಿತ್ರದ ಒಂದೊಂದು ದೃಶ್ಯವೂ ವಿವಾದ ಸೃಷ್ಟಿಸಿತ್ತು. ಈಗ ಆ ಚಿತ್ರವನ್ನು ಮತ್ತೊಮ್ಮೆ ರಿಲೀಸ್ ಮಾಡಲು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮುಂದಾಗಿದ್ದಾರೆ.

ಹಳೆಯ ಹಿಟ್ ಚಿತ್ರಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ, ಇತ್ತೀಚೆಗೆ ಉಪೇಂದ್ರ ಅವರ ಐ ಲವ್ ಯೂ ಚಿತ್ರ ಶತದಿನೋತ್ಸವ ಪೂರೈಸಿದ್ದು ಈ ಬಗ್ಗೆ ಯೋಚಿಸಲು ಕಾರಣವಂತೆ.

ತಾವೇ ನಿರ್ಮಾಪಕರಾಗಿದ್ದರೂ, ನಿರ್ದೇಶಕ ಉಪೇಂದ್ರ ಅವರ ಅಭಿಪ್ರಾಯವನ್ನೂ ಪಡೆಯುತ್ತೇನೆ ಎಂದಿದ್ದಾರೆ ಶಿಲ್ಪಾ ಶ್ರೀನಿವಾಸ್. ಎಲ್ಲವೂ ಓಕೆ ಆದರೆ, ಕನ್ನಡ, ತೆಲುಗು ಅಷ್ಟೇ ಅಲ್ಲ, ತಮಿಳಿನಲ್ಲೂ ಉಪೇಂದ್ರ ದರ್ಶನವಾಗಲಿದೆ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery