` ಕನ್ನಡ ಪ್ರೇಮಿ.. ಪರಭಾಷಾ ದ್ವೇಷಿಯಲ್ಲ ಈ ಶಂಕರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ganesh clarifies on geetha doubts
Geetha Movie Image

ಗೀತಾ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಎದ್ದಿರುವ ಪ್ರಶ್ನೆ ಇದು. ಚಿತ್ರದಲ್ಲಿ ಗೋಕಾಕ್ ಚಳವಳಿಯ ಪ್ರಸ್ತಾಪ, ಗಣೇಶ್ ಅವರ ಸಿಡಿಲಿನಂತಾ ಮಾತುಗಳು.. ಇವೆಲ್ಲವನ್ನೂ ಕೇಳಿದವರಿಗೆ ಇದು ಪರಭಾಷಾ ದ್ವೇಷಿ ಸಿನಿಮಾನ ಎಂಬ ಅನುಮಾನ ಮೂಡಿರಲಿಕ್ಕೂ ಸಾಕು. ಇದೆಲ್ಲ ಅನುಮಾನಗಳಿಗೂ ಗಣೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

`ಚಿತ್ರದ ನಾಯಕ ಶಂಕರ್, ಅಪ್ಪಟ ಕನ್ನಡ ಪ್ರೇಮಿ. ಆದರೆ, ಪರಭಾಷಾ ದ್ವೇಷಿಯಲ್ಲ. ಪರಭಾಷೆಗಳನ್ನು ದ್ವೇಷಿಸುವ ಸಣ್ಣ ಅಂಶವೂ ಚಿತ್ರದಲ್ಲಿಲ್ಲ. ಭಾಷೆಯ ವಿಚಾರ ಬಂದಾಗ ಅಭಿಮಾನವನ್ನೇ ಹೋರಾಟವಾಗಿ ಬದಲಿಸುವಂತಹ ಸೂಕ್ಷ್ಮ ಶಕ್ತಿ ಚಿತ್ರದ ಕಥೆಯಲ್ಲಿದೆ ಎಂದಿದ್ದಾರೆ ಗಣೇಶ್.

ವಿಜಯ್ ನಾಗೇಂದ್ರ ನಿರ್ದೇಶಿಸಿರುವ ಚಿತ್ರಕ್ಕೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery