ಧರ್ಮ ಕೀರ್ತಿರಾಜ್ ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೋ ಎಂದೇ ಗುರುತಿಸಿಕೊಂಡಿರುವ ನಟ. ಅವರಿಗೆ ಆ ಹೆಸರು ಕೊಟ್ಟಿದ್ದು ದರ್ಶನ್ ಅವರದ್ದೇ ನವಗ್ರಹ ಚಿತ್ರದಿಂದ. ಈಗ ಆ ಇಮೇಜಿನಿಂದ ಹೊರಬರಲು ತಲ್ವಾರ್ ಹಿಡಿದಿದ್ದಾರೆ ಧರ್ಮ ಕೀರ್ತಿರಾಜ್.
ಧರ್ಮ ರಗಡ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ತಲ್ವಾರ್ ಚಿತ್ರಕ್ಕೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಮುಮ್ತಾಜ್ ಮುರಳಿ ಚಿತ್ರದ ನಿರ್ದೇಶಕ. ಟಚ್ ಸ್ಟೋನ್ ಬ್ಯಾನರಿನ ಬಿ.ವೈ. ಸುರೇಶ್ ತಲ್ವಾರ್ ಚಿತ್ರಕ್ಕೆ ನಿರ್ಮಾಪಕ.