ಅಧ್ಯಕ್ಷ ಇನ್ ಅಮೆರಿಕ ಚಿತ್ರ ರಿಲೀಸಿಗೆ ರೆಡಿಯಾಗಿದೆ. ಈ ಚಿತ್ರದ ನಿರ್ದೇಶಕ ಯೋಗಾನಂದ ಮುದ್ದಾನ್. ಮೂಲತಃ ಸಂಭಾಷಣೆಕಾರರಾಗಿರುವ ಯೋಗಾನಂದ್ ಮುದ್ದಾನ್, ಈ ಹಿಂದೆ ಕೆಲವು ಕಾಮಿಡಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಈಗ ಶರಣ್ ಚಿತ್ರಕ್ಕೆ ನಿರ್ದೇಶಕ.
ಯೋಗಾನಂದ್ ನನ್ನ ರ್ಯಾಂಬೋ ಚಿತ್ರಕ್ಕೆ ಡೈಲಾಗ್ ಬರೆಯಬೇಕಿತ್ತು. ಆಗಿರಲಿಲ್ಲ. ಕೊನೆಗೆ ಅವರು ನಿರ್ದೇಶಕರಾಗಿಯೇ ನನ್ನ ಕೈಗೆ ಸಿಕ್ಕರು ಎಂದಿರುವ ಶರಣ್, ಮುಂದಿನ ದಿನಗಳಲ್ಲಿ ಯೋಗಾನಂದ್ ನನ್ನ ಕೈಗೂ ಸಿಗಬಾರದು. ಅಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದ್ದಾರೆ.
ತಮ್ಮ ಚಿತ್ರದ ನಿರ್ದೇಶಕರಿಗೆ ನಾಯಕ ನಟನೊಬ್ಬ ಈ ರೀತಿಯಲ್ಲೂ ಹಾರೈಸಬಹುದಾ..? ಶರಣ್ ಹಾರೈಕೆ ನಿಜವಾಗಲಿ. ವಿಶ್ವಪ್ರಸಾದ್ ನಿರ್ಮಾಣದ ಚಿತ್ರದಲ್ಲಿ ಶರಣ್‍ಗೆ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.