Print 
shanvi srivatsav, geetha,

User Rating: 5 / 5

Star activeStar activeStar activeStar activeStar active
 
ganesh shares screen with dr raj in geetha
Geetha Movie Image

ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅಣ್ಣಾವ್ರ ಜೊತೆ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದೇ ನನ್ನ ಜೀವನದ ಅದ್ಭುತ ಥ್ರಿಲ್ ಎಂದಿದ್ದಾರೆ ಗಣೇಶ್. ಅರೆ.. ಇದು ಹೇಗೆ ಸಾಧ್ಯ.. ಎಂದು ಹುಬ್ಬೇರಿಸಬೇಡಿ. ಎಲ್ಲವೂ ಗ್ರಾಫಿಕ್ಸ್ ಮಹಾತ್ಮೆ.

ಇಡೀ ಚಿತ್ರ ಗೋಕಾಕ್ ಚಳವಳಿಯ ಕಾಲದ ಕಥೆ. ಸಿನಿಮಾದಲ್ಲಿ ಗಣೇಶ್ ನಟಿಸಿರುವ ಶಂಕರ್ ಎನ್ನುವ ಪಾತ್ರ, ಕಾರ್ಮಿಕರ ನಾಯಕನದ್ದು. ಆತ ಗೋಕಾಕ್ ಚಳವಳಿಗೆ ಧುಮುಕುತ್ತಾನೆ. ಅಣ್ಣಾವ್ರ ಜೊತೆ ಹೋರಾಟಕ್ಕಿಳಿಯುತ್ತಾನೆ.

`ಚಿತ್ರಕ್ಕಾಗಿ ಹಳೆಯ ಫುಟೇಜ್‍ಗಳನ್ನು ಮರುಸೃಷ್ಟಿಸಲಾಯ್ತು. ಸಿಜೆ ವರ್ಕ್‍ನಲ್ಲಿ ಡಾ.ರಾಜ್ ಜೊತೆ ನಾನು ಬರುವ ದೃಶ್ಯಗಳನ್ನು ಸೇರಿಸಲಾಯ್ತು. ಆ ಲೆಕ್ಕದಲ್ಲಿ ನಾನು ಅಣ್ಣಾವ್ರ ಜೊತೆ ಸೀನ್ ಹಂಚಿಕೊಂಡಿದ್ದೇನೆ. ಆ ದೃಶ್ಯವನ್ನು ಸಿಜೆನಲ್ಲಿ ನೋಡುತ್ತಿದ್ದಂತೆಯೇ ಥ್ರಿಲ್ ಆದೆ' ಎಂದಿದ್ದಾರೆ ಗಣೇಶ್.

ಗಣೇಶ್ ಜೊತೆ ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್, ಸುಧಾರಾಣಿ ನಟಿಸಿದ್ದಾರೆ. ವಿಜಯ್ ನಾಗೇಂದ್ರ ಚಿತ್ರದ ನಿರ್ದೇಶಕ.