Print 
shanvi srivatsav, golden star ganesh, geetha,

User Rating: 0 / 5

Star inactiveStar inactiveStar inactiveStar inactiveStar inactive
 
shanvi talks about geetha movie
Shanvi Image from Geetha Movie

ಶಾನ್ವಿ ಶ್ರೀವಾಸ್ತವ್ ತೆರೆ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ ವರ್ಷವಾಗಿದೆ. 2018ರಲ್ಲಿ ದಿ ವಿಲನ್ ಚಿತ್ರದ ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದೇ ಕೊನೆ. ಅದಕ್ಕೂ ಮುನ್ನ ಅವರು 2017ರಲ್ಲಿ ಮಫ್ತಿ ಮತ್ತು ತಾರಕ್‍ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಶಾನ್ವಿ ತೆರೆ ಮೇಲೆ ಕಾಣಿಸಿಲ್ಲ.

ಈಗ ಸುದೀರ್ಘ ಗ್ಯಾಪ್ ನಂತರ ಈ ವಾರ ತೆರೆಗೆ ಬರುತ್ತಿದ್ದಾರೆ ಶಾನ್ವಿ. ಗೀತಾ ಚಿತ್ರದಲ್ಲಿ ಪ್ರಿಯಾ ಪಾತ್ರಧಾರಿಯಾಗಿ ಬರುತ್ತಿರುವ ಶಾನ್ವಿಗೆ, ಗಣೇಶ್ ಜೊತೆ ಇದು 2ನೇ ಸಿನಿಮಾ.

ಈ ಚಿತ್ರದಲ್ಲಿ ನನ್ನದು ರೆಟ್ರೋ ಶೈಲಿಯ ಪಾತ್ರ. ಪಾತ್ರದಲ್ಲಿ ಎಲ್ಲ ಎಮೋಷನ್ಸ್ ಇವೆ. ಅದರಲ್ಲೂ ಚಿತ್ರದಲ್ಲಿ ನನ್ನದು ಆಗಿನ ಕಾಲದ ಮಾಡರ್ನ್ ಯುವತಿಯ ಪಾತ್ರ. ಮೊದಲೇ ನಾನು ಕನ್ನಡದವಳಲ್ಲ. ಕನ್ನಡದಲ್ಲಿ ಅದರಲ್ಲೂ ಆ ಪ್ರದೇಶದಲ್ಲಿ ಆಗಿನ ಕಾಲದ ಯುವತಿಯರು ಹೇಗಿರುತ್ತಿದ್ದರೋ ಗೊತ್ತಿರಲಿಲ್ಲ. ಅದಕ್ಕಾಗಿ ಹಲವು ಕನ್ನಡ ಚಿತ್ರಗಳನ್ನು ನೋಡಿ, ಅದೇ ಶೈಲಿಯಲ್ಲಿ ಸಿದ್ಧಳಾದೆ ಎಂದಿದ್ದಾರೆ ಶಾನ್ವಿ ಶ್ರೀವಾಸ್ತವ್.

ಚಿತ್ರದಲ್ಲಿ ದಪ್ಪನೆಯ ಹೇರ್ ಬ್ಯಾಂಡ್, ಕಣ್ಣಿಗೆ ಗಾಢವಾದ ಕಾಡಿಗೆ, ಐ ಲೈನರ್‍ಗಳಲ್ಲಿ ನಟಿಸಿದ್ದಾರೆ ಶಾನ್ವಿ.

ವಿಜಯ್ ನಾಗೇಂದ್ರ ನಿರ್ದೇಶನದ ಗೀತಾ ಸಿನಿಮಾಗೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು.