Print 
darshan, muniratna kurukshetra,

User Rating: 5 / 5

Star activeStar activeStar activeStar activeStar active
 
kurukshetra 50 days celebrations by darshan fans
Kurukshetra Movie Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಯಶಸ್ವಿಯಾಗಿ 50 ದಿನ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ನಾಳೆ ಅಂದರೆ ಸೆ.21ರಂದು ದಿನವಿಡೀ ಸಂಭ್ರಮಾಚರಣೆಗೆ ಪ್ಲಾನ್ ಮಾಡಿದ್ದಾರೆ.

ಹಲವೆಡೆ ಅಭಿಮಾನಿಗಳ ಸಂಭ್ರಮ ಬೆಳಗ್ಗೆಯೇ ಶುರುವಾಗಲಿದೆ. ಟೈಂಟೇಬಲ್ ಕೂಡಾ ಇದೆ. ಬೆಳಗ್ಗೆ 10ಕ್ಕೆ ದರ್ಶನ್ ಕಟೌಟ್‍ಗೆ ಮಾಲಾರ್ಪಣೆ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ರಕ್ತದಾನ ಶಿಬಿರ ಹಾಗೂ ರಾತ್ರಿ 7 ಗಂಟೆಗೆ ಪಟಾಕಿ ಸಂಭ್ರಮ.

ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಹರಿಪ್ರಿಯಾ, ಮೇಘನಾ ರಾಜ್, ರವಿಶಂಕರ್, ಸ್ನೇಹಾ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಶಿಕುಮಾರ್.. ಹೀಗೆ ಘಟಾನುಘಟಿ ಕಲಾವಿದರೆಲ್ಲ ಒಟ್ಟಿಗೇ ನಟಿಸಿದ್ದ ಚಿತ್ರಕ್ಕೆ ಮುನಿರತ್ನ ನಿರ್ಮಾಪಕರಾದರೆ, ನಾಗಣ್ಣ ನಿರ್ದೇಶಕ.