Print 
sk padmavathi,

User Rating: 0 / 5

Star inactiveStar inactiveStar inactiveStar inactiveStar inactive
 
first talkie film heroine sk padmavathi no more
SK Padmavathi

ಎಸ್.ಕೆ. ಪದ್ಮಾದೇವಿ, ವಯಸ್ಸು 95. ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದ ಇವರು ಕನ್ನಡದ ಮೊದಲ ವಾಕ್ ಚಿತ್ರ ಭಕ್ತದ್ರುವ ಚಿತ್ರದ ನಾಯಕಿ. ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ರಂಗಭೂಮಿಯಿಂದ ಬಂದ ಪ್ರತಿಭೆಯಾಗಿದ್ದ ಪದ್ಮಾದೇವಿ, ವಸಂತ ಸೇನ, ಜಾತಕ ಫಲ, ಸಂಸಾರ ನೌಕ, ಭಕ್ತ ಸುಧಾಮ.. ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸ್ವತಃ ಗಾಯಕಿಯೂ ಆಗಿದ್ದ ಪದ್ಮಾದೇವಿ, ಹಲವು ಚಿತ್ರಗಳಲ್ಲಿ ಹಾಡನ್ನೂ ಹಾಡಿದ್ದಾರೆ.

ಆಗಿನ ಕಾಲದಲ್ಲಿ ಹೀರೋ ನಾಯಕಿಯನ್ನು ಎತ್ತಿ ಗಾಡಿ ಮೇಲೆ ಕೂರಿಸುವ ದೃಶ್ಯದಂತಹ ರೊಮ್ಯಾಂಟಿಕ್ ದೃಶ್ಯಗಳಿದ್ದ ಕಾರಣಕ್ಕೇ ಹಲವು ಚಿತ್ರಗಳನ್ನು ತಿರಸ್ಕರಿಸಿದ್ದರು ಪದ್ಮಾದೇವಿ. ಹಲವು ಚಿತ್ರಗಳಿಗೆ ಕಂಠದಾನ ಮಾಡಿದ್ದ ಪದ್ಮಾದೇವಿ ಅವರ ಪುತ್ರ ನಂದಕಿಶೋರ್, ಕಿರುಚಿತ್ರ ನಿರ್ದೇಶಕ.