ಒಂದೆಡೆ ಪೈಲ್ವಾನ್ ಸಿನಿಮಾ ಥಿಯೇಟರುಗಳಲ್ಲಿ ಬೊಂಬಾಟ್ ಪ್ರದರ್ಶನ ಕಾಣುತ್ತಿರುವಾಗಲೇ, ಕಿಚ್ಚ ಸುದೀಪ್ ಗಾಂಧಿ ಜಯಂತಿಗೆ ಇನ್ನೊಂದು ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಅದು ಸೈರಾ ಹಬ್ಬ.
ಅಕ್ಟೋಬರ್ 02ರಂದು, ಗಾಂಧಿ ಜಯಂತಿಗೆ ರಿಲೀಸ್ ಆಗುತ್ತಿದೆ ಸೈರಾ ನರಸಿಂಹ ರೆಡ್ಡಿ ಸಿನಿಮಾ. ಅದು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿಯ ಚರಿತ್ರೆ. ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ಕಂಗೊಳಿಸಿದ್ದಾರೆ.
ಚಿತ್ರದ ಟ್ರೇಲರ್ ಹೊರಬಿದ್ದಿದೆ. ಕಿಚ್ಚ ಸುದೀಪ್ ಚಿತ್ರದಲ್ಲಿ ಅವುಕ ರಾಜು ಹೆಸರಿನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಜೊತೆ ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ಜಗಪತಿ ಬಾಬು, ಅನುಷ್ಕಾ ಶೆಟ್ಟಿ, ನಯನತಾರಾ, ತಮನ್ನಾ.. ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾ ಇದು. ತೆಲುಗಿನಲ್ಲಿ ತಯಾರಾಗಿರುವ ಚಿತ್ರ, ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ.