ನಿಷ್ಕರ್ಷ ಸಿನಿಮಾವನ್ನು ಹೊಸ ರೂಪದಲ್ಲಿ ಮತ್ತೊಮ್ಮೆ ನೋಡಲು ವಿಷ್ಣುವರ್ಧನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗೆ ವಿಷ್ಣುದಾದಾನನ್ನು ಮೇಜರ್ ರೂಪದಲ್ಲಿ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುವ ತವಕ. ಅಂದಹಾಗೆ ಅಂತಾದ್ದೊಂದು ತವಕ ವಿಷ್ಣುವರ್ಧನ್ ಅವರ ಗೆಳೆಯರೂ ಆಗಿದ್ದ ರಾಕ್ಲೈನ್ ವೆಂಕಟೇಶ್ ಅವರಿಗೂ ಇದೆ.
1993ರಲ್ಲಿ ರಿಲೀಸ್ ಆಗಿದ್ದ ನಿಷ್ಕರ್ಷ, ಸಂಚಲನ ಸೃಷ್ಟಿಸಿತ್ತು. ಅದೊಂದು ಅದ್ಭುತ ಅನುಭವ ಕೊಟ್ಟಿತ್ತು. ಹಾಲಿವುಡ್ ಶೈಲಿಯಲ್ಲಿ ಬಂದಿದ್ದ ಆ ಚಿತ್ರವನ್ನು ನೋಡಲು ನಾನು ಕಾಯುತ್ತಿದ್ದೇನೆ. ಏಕೆಂದರೆ ನಾನೂ ಕೂಡಾ ವಿಷ್ಣು ಅಭಿಮಾನಿ ಎಂದಿದ್ದಾರೆ ರಾಕ್ಲೈನ್. ನಿಷ್ಕರ್ಷ ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುತ್ತಿರುವ ಬಿ.ಸಿ.ಪಾಟೀಲ್ಗೆ ಶುಭ ಕೋರಿದ್ದಾರೆ ರಾಕ್ಲೈನ್ ವೆಂಕಟೇಶ್.