` KGF CHAPTER 2 ನಲ್ಲಿ ವಿಲನ್ ಆಗಿದ್ದೇಕೆ..? ಸಂಜಯ್ ದತ್ ಬಿಚ್ಚಿಟ್ಟರು ಕಾರಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanjay dutt reveals why he agreed to do villain's role in kgf chapter 2
KGF Chapter 2

ಕೆಜಿಎಫ್ 2, ಕಳೆದ ವರ್ಷ ಅಬ್ಬರಿಸಿ ಬೊಬ್ಬಿರಿದಿದ್ದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದ ಚಿತ್ರವದು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಸೀಕ್ವೆಲ್ನಲ್ಲಿ ವಿಲನ್ ಆಗಿರೋದು ಸಂಜಯ್ ದತ್. ಬಾಲಿವುಡ್ನಲ್ಲಿ ಬಿಂದಾಸ್ ಆಗಿರುವ ಸಂಜಯ್ ದತ್, ಕನ್ನಡ ಚಿತ್ರದಲ್ಲಿ ಖಳನಾಯಕನಾಗಲು ಒಪ್ಪಿದ್ದೇಕೆ..? ಹೀರೋ ಆಗಿಯೇ ಡಿಮ್ಯಾಂಡ್ ಇರುವಾಗ ವಿಲನ್ ಆಗೋಕೆ ಮುಂದಾಗಿದ್ದೇಕೆ..? ಸಂಜಯ್ ದತ್ ಕಾರಣ ಬಿಚ್ಚಿಟ್ಟಿದ್ದಾರೆ.

2012ರಲ್ಲಿ ಬಂದಿದ್ದ ಅಗ್ನಿಪಥ್ ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ಖಳನಾಯಕನಾಗಿ ನಟಿಸಿದ್ದೆ. ಆದರೂ ಮತ್ತೊಮ್ಮೆ ವಿಲನ್ ಆಗಿ ನಟಿಸಬೇಕು ಎಂಬ ಆಸೆಯಿತ್ತು. ನೆಗೆಟಿವ್ ಶೇಡ್ ಇರುವ ಪಾತ್ರಕ್ಕಾಗಿ ಕಾಯುತ್ತಿದ್ದೆ. ಅದೇ ಸಮಯಕ್ಕೆ ಕೆಜಿಎಫ್ 2 ಸಿಕ್ಕಿತು. ಹೀಗಾಗಿ ಒಪ್ಪಿಕೊಂಡೆ. ಈ ಪಾತ್ರ ನನಗೆ ಸೂಕ್ತವಾಗಿದೆ ಎಂದಿದ್ದಾರೆ ಸಂಜಯ್ ದತ್.

ಕೆಜಿಎಫ್ 2ನಲ್ಲಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಭಾಗ 1ರಲ್ಲಿ ಅಧೀರನ ತಮ್ಮ ಗರುಡನನ್ನು ರಾಕಿಭಾಯ್ ಕೊಲ್ಲುತ್ತಾನೆ. ತಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಧೀರ ಎಂಟ್ರಿ ಕೊಡ್ತಾನೆ.