ಮಠ ಮತ್ತು ಎದ್ದೇಳು ಮಂಜುನಾಥ. ಜಗ್ಗೇಶ್ ವೃತ್ತಿ ಜೀವನದ ವಿಭಿನ್ನ ಶೈಲಿಯ ಚಿತ್ರಗಳು. ಎರಡೂ ಚಿತ್ರಗಳಲ್ಲಿ ಜಗ್ಗೇಶ್ ವಿಜೃಂಭಿಸಿದ್ದರು. ನಿರ್ದೇಶಕ ಗುರು ಪ್ರಸಾದ್ ಗೆಲ್ಲಿಸಿದ್ದರು. ಆದರೆ.. ಅದಾದ ನಂತರ ಇಬ್ಬರೂ ದೂರ ದೂರವಾಗಿದ್ದರು. ಕಳೆದ ವರ್ಷವೇ ಒಂದು ಹೆಜ್ಜೆ ಮುಂದಿಟ್ಟಿದ್ದರಾದರೂ.. ಅದು ಕೈಗೂಡಿರಲಿಲ್ಲ. ಈ ಹಿಟ್ ಜೋಡಿ ಈಗ ಮತ್ತೆ ಒಂದಾಗುವ ಸುಳಿವು ನೀಡಿದೆ.
ಗುರುಪ್ರಸಾದ್ ಅವರ ಫೇಸ್ಬುಕ್ ಪ್ರೊಫೈಲ್ನಲ್ಲೀಗ ಜಗ್ಗೇಶ್ ಚಿತ್ರ ಪ್ರತ್ಯಕ್ಷವಾಗಿದೆ. ಅದಕ್ಕೆ ತಕ್ಕಂತೆ ಜಗ್ಗೇಶ್ ‘ಸುಮಾರು 10 ವರ್ಷವಾಯಿತು ನಮ್ಮಿಬ್ಬರ ಜೊತೆಯಾಟ. ನಾನಾ ಕಾರಣಕ್ಕೆ ನಾವಿಬ್ಬರು ಇಷ್ಟು ವರ್ಷ ಸೇರಲಾಗಿರಲಿಲ್ಲ. ಗುರು ಪ್ರಸಾದ್ ನೀವು ಹೂಂ ಅಂದರೆ ಮತ್ತೊಮ್ಮೆ ಜೋಡಿಯಾಗಿ ಕರ್ನಾಟಕವನ್ನ ನಗಿಸುವ ಎಂದು ಹೇಳಿದ. ನಾನು ಓಕೆ ಅಂದೆ. ಮಜ್ಜಿಗೆಯಲ್ಲಿನ ಬೆಣ್ಣೆಯಂತೆ ಕಥೆ ಕಡೆಯಲು ಹೋಗಿದ್ದಾನೆ. ನಮ್ಮಿಬ್ಬರ ಜೋಡಿಗೆ ಎಷ್ಟು ಲೈಕ್ಸ್ ಬರಲಿದೆ ಎಂದು ಕಾಯುವೆ’ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯಕ್ಕೆ ಗುರುಪ್ರಸಾದ್ ಅದೇಮಾ ಚಿತ್ರದಲ್ಲಿ ಬ್ಯುಸಿಯಿದ್ದರೆ, ಜಗ್ಗೇಶ್ ತೋತಾಪುರಿಯಲ್ಲಿ ಬ್ಯುಸಿ. ಮುಂದಾ.. ಕಾದು ನೋಡುವಾ..