` ಪೈಲ್ವಾನ್ ನೋಡಿದ ಚಿತ್ರರಂಗದ ಸ್ಟಾರ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
celebs appreciate pailwan
Celebs Appreciate Pailwan After Watching it

ಪೈಲ್ವಾನ್ ಚಿತ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಎಲ್ಲೆಡೆ ಪೈಲ್ವಾನ್ ಹವಾ. ಬಂದಾ ನೋಡೋ ಪೈಲ್ವಾನ್ ಹಾಡು ಗೆದ್ದಾ ನೋಡೋ ಪೈಲ್ವಾನ್ ಆಗಿದೆ. ದೊರೆಸಾನಿ, ಕಣ್ಮಣಿಯೇ ಹಾಡು ಟ್ರೆಂಡ್ ಸೃಷ್ಟಿಸಿವೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಫುಲ್ ಹ್ಯಾಪಿ. ಈ ನಡುವೆ ಚಿತ್ರರಂಗದ ಹಲವರು ಸ್ವತಃ ಥಿಯೇಟರಿಗೆ ಹೋಗಿ ಪೈಲ್ವಾನ್ ನೋಡಿ ಕಿಚ್ಚ ಸುದೀಪ್ ಮತ್ತು ಕೃಷ್ಣಗೆ ಶಹಬ್ಬಾಸ್ ಎಂದಿದ್ದಾರೆ.

ಸಿಂಪಲ್ ಸುನಿ : ಆಟದ ಜೊತೆ ಭಾವನಾತ್ಮಕ ಸಂಬಂಧಗಳು ಬೆರೆತಿರುವ ಸಿನಿಮಾ. ಮನೆಮಂದಿಯೆಲ್ಲ ನೋಡಬೇಕಾದ ಚಿತ್ರ ಪೈಲ್ವಾನ್.

ರಿಷಬ್ ಶೆಟ್ಟಿ : ಅಭಿಮಾನಿಗಳ ನಡುವೆ ಶಿಳ್ಳೆಗಳ ಅಬ್ಬರದಲ್ಲಿ ನಾನಿದ್ದೇನೆ. ಕಾಮಿಡಿ ಟೈಮಿಂಗ್, ಮದುವೆ ವಾರ್ಷಿಕೋತ್ಸವದ ದಿನ ಅಕ್ಕಪಕ್ಕದವರನ್ನು ಕರೆದು ಹೇಳೋ ಡೈಲಾಗ್ ಸೂಪರ್.

ಪವನ್ ಒಡೆಯರ್ : ಸಿನಿಮಾ ಸೂಪರ್. ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವನ್ನು ತುಂಬಾ ಚೆನ್ನಾಗಿ ಹೇಳಲಾಗಿದೆ.

ಅಶಿಕಾ ರಂಗನಾಥ್ : ಸುದೀಪ್ ಸರ್, ನೀವಂತೂ ವಂಡರ್‍ಫುಲ್.  ಸಿನಿಮಾ ಸೂಪರ್. ನಿಮ್ಮ ಡೆಡಿಕೇಷನ್ ನೋಡುತ್ತಿದ್ದರೆ, ನಮ್ಮಂತಹವರಿಗೆ ಸ್ಫೂರ್ತಿ.

ಮಾನ್ವಿತಾ ಕಾಮತ್ : ಖಂಡಿತಾ ಫ್ಯಾಮಿಲಿ ಎಂಟರ್‍ಟೇನರ್ ಸಿನಿಮಾ. ಕಿಚ್ಚ ಸುದೀಪ್ ಪರಿಶ್ರಮ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿದೆ.

ಇನ್ನು ಸಿನಿಮಾ ನೋಡಿ ಪರ್ಸನಲ್ ಆಗಿ ಸುದೀಪ್ ಅವರಿಗೆ ಕಂಗ್ರಾಟ್ಸ್ ಹೇಳಿರುವವರ ಸಂಖ್ಯೆಯೂ ದೊಡ್ಡದಿದೆ.