ರಾಕಿಂಗ್ ಸ್ಟಾರ್ ಯಶ್ ಮತ್ತು ತೆಲುಗಿನ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ನಿನಲ್ಲಿ ಜನಗಣಮನ ಅನ್ನೋ ಹೆಸರಿನ ಸಿನಿಮಾ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ಡಿನಿಂದಲೇ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಪುರಿ ಜಗನ್ನಾಥ್, ಯಶ್ ಅವರಿಗೆ ಒನ್ ಲೈನ್ ಸ್ಟೋರಿ ಹೇಳಿದ್ದಾರೆ. ಮೂಲಗಳ ಪ್ರಕಾರ ಯಶ್ ಅವರಿಗೆ ಒನ್ ಲೈನ್ ಇಷ್ಟವಾಗಿದೆ.
ಸದ್ಯಕ್ಕೆ ಪುರಿ, ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್, ಕೆಜಿಎಫ್-2ನಲ್ಲಿ ಬ್ಯುಸಿಯಾಗಿದ್ದಾರೆ.
ಪುರಿ ಜಗನ್ನಾಥ್ ಕನ್ನಡಕ್ಕೆ ಹೊಸಬರಲ್ಲ. ಅಪ್ಪು ಮೂಲಕ ಪುನೀತ್‍ರನ್ನು ಹೀರೋ ಆಗಿ ಲಾಂಚ್ ಮಾಡಿದ್ದವರೇ ಪುರಿ ಜಗನ್ನಾಥ್. ಯುವರಾಜ ಚಿತ್ರವನ್ನು ನಿರ್ದೇಶಿಸಿದ್ದವರೂ ಅವರೇ. ಪೊಕಿರಿ, ಬದ್ರಿ, ತಮ್ಮುಡು, ಬ್ಯಸಿನೆಸ್ ಮ್ಯಾನ್, ಇಸ್ಮಾರ್ಟ್ ಶಂಕರ್, ಅಮ್ಮ ನಾನ್ನ ಒಕ ತಮಿಳು ಅಮ್ಮಾಯಿ.. ಹೀಗೆ ಹಿಟ್ ಚಿತ್ರಗಳ ಸಾಲೇ ಪುರಿ ಲಸ್ಟಿನಲ್ಲಿದೆ. ಯಶ್ ಕೂಡಾ ಜೊತೆಯಾದರೆ.. ವೇಯ್ಟ್ & ಸೀ.