` ಅನೀಶ್ ಚಿತ್ರಕ್ಕೆ ಪವರ್ ಸ್ಟಾರ್ ಹ್ಯಾಟ್ರಿಕ್ ಹಾಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth sings for anish's ramarjuna
Puneeth Rajkumar, Anish Tejeshwar

ಅನೀಶ್ ತೇಜೇಶ್ವರ್ ಅಭಿನಯದ ಹೊಸ ಸಿನಿಮಾ ರಾಮಾರ್ಜುನ ಚಿತ್ರಕ್ಕೆ ಒಂದು ಹಾಡು ಹಾಡಿದ್ದಾರೆ ಪುನೀತ್ ರಾಜ್‍ಕುಮಾರ್. ಮನಸೇ ಚೂರು ದಾರಿಯನ್ನು ತೋರು ನೀನು.. ಅನ್ನೋ ಹಾಡಿಗೆ ಧ್ವನಿ ಕೊಟ್ಟಿದ್ದಾರೆ ಪುನೀತ್. ವಿಶೇಷವೆಂದರೆ ಪುನೀತ್ ರೊಮ್ಯಾಂಟಿಕ್ ಹಾಡು ಹಾಡಿರೋದು.

ಸಾಮಾನ್ಯವಾಗಿ ಎಲ್ಲರೂ ಪುನೀತ್ ಸರ್ ಕಡೆಯಿಂದ ಇಂಟ್ರೊಡಕ್ಷನ್ ಸಾಂಗ್ ಹಾಡಿಸ್ತಾರೆ. ಆದರೆ, ನನ್ನ ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್. ನವೀನ್ ರೆಡ್ಡಿ ಸಾಹಿತ್ಯಕ್ಕೆ ಅಪ್ಪು ಸರ್ ಭಾವ ತುಂಬಿದ್ದಾರೆ ಎಂದಿದ್ದಾರೆ ಅನೀಶ್.

ಈ ಹಿಂದೆ ಅನೀಶ್ ಅವರ ಅಕಿರ, ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲೂ ಪುನೀತ್ ಹಾಡಿದ್ದರು. ಅಲ್ಲಿಗೆ ಅನೀಶ್ ಚಿತ್ರದಲ್ಲಿ ಸಿಂಗರ್ ಅಗಿ ಹ್ಯಾಟ್ರಿಕ್ ಬಾರಿಸಿದ್ದಾರೆ ಪುನೀತ್.

Shivarjun Movie Gallery

Actor Bullet Prakash Movie Gallery