ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಅನಂತ್ ನಾಗ್ ಅವರನ್ನು ನಾಯಕರನ್ನಾಗಿಸಿರುವ ರಿಷಬ್, ಚಿತ್ರಕ್ಕೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಚಿತ್ರರಂಗಕ್ಕೆ ಬಂದವರಾದರೂ ಸದ್ಯಕ್ಕೆ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.
ಅವರದ್ದು ರೆಗ್ಯುಲರ್ ಪಾತ್ರ ಅಲ್ಲ. ಚಿತ್ರದಲ್ಲಿ ಒಟ್ಟು 9 ಪಾತ್ರಗಳಿವೆ. ಆ 9 ಪಾತ್ರಗಳಲ್ಲಿ ಶ್ರದ್ಧಾ ಅವರದ್ದು ಪ್ರಮುಖ ಪಾತ್ರ. ತುಂಬಾ ವೈಶಿಷ್ಟ್ಯಪೂರ್ಣ ಪಾತ್ರ ಎಂದಿದ್ದಾರೆ ರಿಷಬ್.
ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗುತ್ತಿರುವ ರುದ್ರಪ್ರಯಾಗ ಚಿತ್ರಕ್ಕೆ ಮುಂದಿನ ತಿಂಗಳು ಶೂಟಿಂಗ್ ಶುರುವಾಗಲಿದೆ.