ರಿಯಲ್ ಸ್ಟಾರ್ ಉಪೇಂದ್ರ, ಕರ್ವ ನವನೀತ್, ಪ್ರೊಡ್ಯೂಸರ್ ತರುಣ್ ಶಿವಪ್ಪ ಮೂವರೂ ಒಟ್ಟಿಗೇ ಸೇರಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಉಪ್ಪಿ ಸ್ಟೈಲ್‍ನಲ್ಲಿಯೇ ಬರುವ ಮನರಂಜನಾತ್ಮಕ ಚಿತ್ರ ಎಂದಿದ್ದಾರೆ ತರುಣ್.
ಕರ್ವ ಚಿತ್ರದ ಮೂಲಕ ಗಮನ ಸೆಳೆದಿದ್ದ ನವನೀತ್ ಈ ಚಿತ್ರಕ್ಕೆ ನಿರ್ದೇಶಕ. ಹೊಸ ವಿಷಯ, ಹೊಸ ಜಾನರ್‍ನ ಕಥೆ. ಉಪೇಂದ್ರ ಅವರಿಗಾಗಿ ಕಥೆಯನ್ನು ವಿಭಿನ್ನವಾಗಿ ಹೇಳಲು ಹೊರಟಿದ್ದಾರೆ ನವನೀತ್. ಚಿತ್ರದ ಫಸ್ಟ್ ಲುಕ್ ಸೆಪ್ಟೆಂಬರ್ 18ರಂದು ಉಪ್ಪಿ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ.